ಶಾಂತಾ ಜಯಾನಂದ್ – ಸೀಮಾತೀತ

ಕಾವ್ಯ ಸಂಗಾತಿ

ಶಾಂತಾ ಜಯಾನಂದ್

ಸೀಮಾತೀತ

ಕನ್ನಡವನ್ನೇಕೆ
ಆಯಕಟ್ಟಿನ
ಚೌಕಟ್ಟಿನಲ್ಲಿ
ಹಿಡಿದಿರುವೆ,
ಕರುನಾಡೆಂಬ ಸೀಮೆಯಲಿ,

ಸೀಮಾತೀತ ಸಂಸ್ಕೃತಿ
ಕನ್ನಡ ದುಸಿರು
ಭೂಮಂಡಲದ
ದೇಶ ವಿದೇಶ
ಗಳೆಂಬ,
ಹಲವು ತುಣುಕುಗಳಲಿ,

ಕನ್ನಡದ ಕಂದಮ್ಮಗಳೆಂಬ
ಮುತ್ತುಗಳು,
ಭೂಮಂಡಲದಲ್ಲೆಲ್ಲಾ
ಚಲ್ಲಾಡಿ ಹರಡಿ,
ಉಸಿರಾಡುತ್ತಿವೆ,
ಕನ್ನಡವನ್ನೇ
ಅಲ್ಲೂ ಸಂಸ್ಥಾಪಿಸುತ್ತಿವೆ
ಕನ್ನಡ ಸಂಸ್ಕೃತಿಯನ್ನೇ,
ಹೆಮ್ಮೆಯಿಂದ ಹೇಳುವೆ,
ನಾವು ಕನ್ನಡಿಗರು
ನಾವು ಕನ್ನಡಿಗರು,

ಬಂಧಿಸಬೇಡ
ನಿನ್ನ ಸಂಕುಚಿತತೆಯ
ಅಂಧಕಾರದಲ್ಲಿ

ತಿಂಗಳಿಂದ, ದಿನಾಂಕ
ದಿಂದ ಬಂಧಿಸದಿರು
ನಮ್ಮ ಹೆಮ್ಮೆಯ
ಕನ್ನಡವ,

ಸಪ್ತ ಸಮುದ್ರಗಳಾಚೆ
ಸೀಮೋಲ್ಲೊಂಘನ ಮಾಡಿ
ಉಸಿರಿದ ಕನ್ನಡ ಧ್ವನಿಯೇ
ರಾಜ್ಯೋತ್ಸವ,
ದಿನವಲ್ಲವೇ

ಯಾವುದೋ ಕಾಡಿನಲಿ
ಯಾವುದೋ ನಾಡಿನಲಿ
ಎಲ್ಲಿಯದೊ, ಹಿಮಾಚ್ಚಾದಿತ
ಪರ್ವತಗಳಲ್ಲಿ
ನಭದಲ್ಲಿ
ನೆಲದಲ್ಲಿ

ನಾವು ಕನ್ನಡಿಗರೆಂದು
ಒಗ್ಗೂಡಿ ಹರ್ಷಿಸಿದ
ದಿನವೇ ರಾಜ್ಯೋತ್ಸವವಲ್ಲವೇ?

ಹಿಡಿದಿಡಬೇಡ ಕನ್ನಡವ
ಆಯಾಕಟ್ಟಿನಲ್ಲಿ
ಕನ್ನಡದ ಉಸಿರ.


ಶಾಂತಾ ಜಯಾನಂದ್.

3 thoughts on “ಶಾಂತಾ ಜಯಾನಂದ್ – ಸೀಮಾತೀತ

  1. ನವೆಂಬರ್ ಬಂದರೆ ಮಾತ್ರ ಕನ್ನಡ ನೆನಪಾಗುತ್ತದೆ ಆಂಗ್ಲ ಭಾಷೆಯಲ್ಲಿ ಮಾತನಾಡಿದರೆ, ನಮ್ಮ ಫನತೆ ಹೆಚ್ಚು ಎಂದು ತಿಳಿದಿರುವವರೇ ಹೆಚ್ಚಿನ ಜನ. ಎಲ್ಲ ಕಡೆಯಲ್ಲೂ ಕನ್ನಡ ಮಾತನಾಡಿದರೆಆಗ ಕನ್ನಡ ಭಾಷೆಗೆ ಗೌರವ

Leave a Reply

Back To Top