ಕವಿತೆ
ಕಾರ್ಮಿಕರ ಕೂಗು
ಈರಪ್ಪ ಬಿಜಲಿ
ಕಾರ್ಮಿಕರ ಕೂಗು”
ಚೋಟುದ್ದದ ಹೊಟ್ಟೆಚೀಲವ ತುಂಬಿಸಲು
ಮನುಜ ಮಾಡುವನು ಕೂಲಿ ಕೆಲಸಗಳನು
ಕಟ್ಟಡ,ಬಡಗಿತನ,ವೆಲ್ಡಿಂಗ್ ,ಪೈಪ್ಲೈನಗಳು
ಪೇಂಟರ್,ಪೌರ,ಸಿಂಪಿಗಕಮ್ಮಾರಿಕೆ,ಅನೇಕ ಕರ್ಮಗಳು।।1।।
ನಮ್ಮಿ ಕಾರ್ಮಿಕರಿಗಿಲ್ಲ ಜೀವನದ ಭದ್ರೆತೆ
ಅವರ ಜೀವನವಿರುವುದು ಬಲು ವಿಭಿನ್ನತೆ
ಬಂಡ್ವಾಳಷಾಹಿ,ಕಾರ್ಮಿಕರಲ್ಲಿನ ತಾರತಮ್ಯತೆ
ದೂರಾಗಿ ಮೂಡಿಬರಲಿ ಎರಡೂಗುಂಪಲಿ ಸರಿಸಮಾತೆ।।2।।
ಕಾರ್ಮಿಕರ ಕೂಗು ನೊಂದ ಮನಗಳ ಕೂಗು
ಕೇಳುತ ಧನಿಕರು ಹಿಗ್ಗಿಸುವರು ತಮ್ಮಯ ಮೂಗು
ಹೃದಯಸಿರಿವಂತಿಕೆಲಿ ಕಾರ್ಮಿಕರ ಮನಸ್ಸದು ಮಗು
ವೇತನದ ದಿನದಂದು ಇವರ ಮುಖದಲಿ ಕಿಲಕಿಲ ನಗು।।3।।
ಜೀವದ ಅಂಗುತೊರೆದು ಅವಿರತ ದುಡಿವವರು
ನಿರ್ಭಯವಾಗಿ ಬಹುಅಂತಸ್ತಿನ ಕಟ್ಟಡಗಳ ಕಟ್ಟುವವರು।
ನಗರದ ಕಾರ್ಮಿಕರ ಮಕ್ಕಳಿಗೆ ವಿದ್ಯೆಯಕೊರತೆ
ಕಾರ್ಮಿಕರಿಗೆ ಶಾಶ್ವತವಾದ ಆಶ್ರಯಸ್ಥಳಗಳ ಕೊರತೆ ।।4।
ಕೂಲಿಗಾಗಿ ವಲಸೆ ಹೋಗುವ ಕಾರ್ಮಿಕರು
ಕೆಲಸದ ಮೇಲೆ ದುರ್ಘಟನೆಗೆ ತುತ್ತಾಗಿ ಬಲಿಯಾಗುವರು
ಬಲಿಯಾಗುವ ಕುಟುಂಬಗಳಿಗೆ ದೊರಕಲಿ ಉತ್ತಮ ಪರಿಹಾರ
ಧನಿಕರ ಮೂಲಕ ದೊರಕಿಸಲಿ ನಮ್ಮಿಘನ ಸರ್ಕಾರ।।5।।
*****
ಕಟ್ಟಡ ಕೆಲಸಗಳ ಮಾಡುವ ನಮ್ಮೀ ಕಾರ್ಮಿಕರು
ನವ ನಗರಗಳ ನಿರ್ಮಿಸುವ ಹೆಮ್ಮೆಯ ನಿರ್ಮಾಪಕರು।
ಆಲಿಸಲಿ ಕಾರ್ಮಿಕರ ಕೂಗನು ಮಾಲೀಕರು
ಹೃದಯವಂತಿಕೆಯನು ಮೆರೆವಂತಾಗಲಿ ಸಿರಿವಂತರು ।।6।।