ಆಶಾ ಎಸ್ ಯಮಕನಮರಡಿ-ಸರ್ಕಾರಿ ಕನ್ನಡ ಶಾಲೆಗಳನ್ನು ಬಲಪಡಿಸುವುದು ಹೇಗೆ?

ಕನ್ನಡ ರಾಜ್ಯೋತ್ಸವ ವಿಶೇಷ

ಆಶಾ ಎಸ್ ಯಮಕನಮರಡಿ

ಸರ್ಕಾರಿ ಕನ್ನಡ ಶಾಲೆಗಳನ್ನು ಬಲಪಡಿಸುವುದು ಹೇಗೆ?

ಒಂದು ದೇಶದ ಸರ್ವತೋಮುಖ ಬೆಳವಣಿಗೆಯಲ್ಲಿ ಶಿಕ್ಷಣದ ಪಾತ್ರ ಬಹಳ ದೊಡ್ಡದು. ಸಮಾಜದ ಎಲ್ಲಾ ರಂಗಗಳ ಅಭಿವೃದ್ಧಿಗೆ ಕಾರಣವು ಶಿಕ್ಷಣವೆ ಆಗಿದೆ.
ಶಿಕ್ಷಣದಿಂದ ವ್ಯಕ್ತಿಯ ವ್ಯಕ್ತಿತ್ವ ಬೆಳವಣಿಗೆ ಜ್ಞಾನ ವೃದ್ಧಿ
ಎಲ್ಲಾ ವಿದ್ಯಮಾನಗಳನ್ನು ಅರಿಯುವ ಶಕ್ತಿ ದೊರೆಯುತ್ತದೆ.ಇಂತಹ ಅಮುಲ್ಯ ಹಾಗೂ ಅವಶ್ಯಕ ಶಿಕ್ಷಣವನ್ನು ವ್ಯವಸ್ಥಿತವಾಗಿ ತನ್ನ ಪ್ರಜೆಗಳಿಗೆ ಒದಗಿಸುವುದು ಆಯಾ ದೇಶದ ಸರಕಾರದ ಆಡಳಿತ ಬಹುಮುಖ್ಯ ಹೊಣೆಯಾಗಿದ್ದು ತ್ತದೆ.
ಆ ನಿಟ್ಟಿನಲ್ಲಿ ಕೆಲಸಮಾಡುವ ಬಹುಮುಖಿ ಶಿಕ್ಷಣ ಕೇಂದ್ರಗಳು ನಮ್ಮ ಸರಕಾರಿ ಶಾಲೆಗಳು. ಇಂತಹ ಗುರುತರ ಹೊಣೆ ಹೊತ್ತಿರುವ ನಮ್ಮ ಕನ್ನಡಭಾಷೆಯ ಸರ್ಕಾರಿ ಶಾಲೆಗಳು ಕೇವಲ ವಿದ್ಯಾರ್ಥಿಗಳಿಗೆ ಕನ್ನಡ ಭಾಷೆ  ಪಠ್ಯ ಬೋಧನೆ ಮಾತ್ರ ಕಲಿಸುವ ಕೇಂದ್ರಗಳಲ್ಲಾ .ಇವು ಕನ್ನಡ ಭಾಷೆ ಕಲೆ ಸಾಹಿತ್ಯ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಜವಾಬ್ದಾರಿ ನಿರ್ವಹಿಸುತ್ತವೆ.
ಈ ನಿಟ್ಟಿನಲ್ಲಿ ಕನ್ನಡ ಸರ್ಕಾರಿ ಶಾಲೆಗಳಲ್ಲಿ ದೊರೆಯುವ ಶಿಕ್ಷಣದ ಗುಣಮಟ್ಟ,ಕಲಿಕೆಗೆ ಪೂರಕವಾಗುವ  ಎಲ್ಲಾ ವ್ಯವಸ್ಥೆಗಳು, ವಿದ್ಯಾರ್ಥಿಗಳಿಗೆ ಬೇಕಾಗುವ ಮೂಲಭೂತ ಸೌಕರ್ಯ ಸೌಲಭ್ಯಗಳು ಸರಿಯಾದ ಸಮಯಕ್ಕೆ
ಸಮರ್ಪಕವಾಗಿ ತಲುಪುವಂತಿರಬೇಕು.
ಸರಕಾರ ಕನ್ನಡ ಸರ್ಕಾರಿ ಶಾಲೆಗಳಿಗೆ ಒದಗಿಸುವ ಎಲ್ಲಾ ಸೌಲಭ್ಯಗಳು ಕೇವಲ ಅಂಕಿ ಅಂಶಗಳ ಸಾಲುಗಳಾಗಿ ಕರಡುಗಳಲ್ಲಿ ನಮೂದಾಗದೆ
ನೇರವಾಗಿ ತಲುಪುವ ವ್ಯವಸ್ಥೆ ಅತ್ಯಂತ ಪಾರದರ್ಶಕವಾಗಿ ಇರಬೇಕು.
ಅನ್ಯಭಾಷೆಗಳ ಪ್ರಾಬಲ್ಯವಿರುವ ಪ್ರದೇಶಗಳಲ್ಲಿ ಅಲ್ಪಸಂಖ್ಯೆಯಲ್ಲಿ ಕನ್ನಡಿಗರು ಇದ್ದರೂ ಸಹಿತ
ಅಲ್ಲಿಯು ಅಲ್ಲಿನ ಕನ್ನಡ ಮಕ್ಕಳ ಸಂಖ್ಯೆಗಳ ಆಧಾರದ ಮೇಲೆ ಅಲ್ಲಿಯು ಪ್ರಾಥಮಿಕ ಮಟ್ಟದ ಶಾಲೆಯನ್ನಾದರೂ ಪ್ರಾರಂಭಿಸಿ ಆ ಮೂಲಕ ಅನ್ಯಭಾಷೆಯತ್ತ ಕನ್ನಡದ ಮಕ್ಕಳು ವಲಸಿಹೋಗುವುದನ್ನು ತಡೆಗಟ್ಟಬಹುದು.
ಬಲು ಮುಖ್ಯವಾಗಿ ಹೊಬಳಿಮಟ್ಟದಲ್ಲಿ ಕನ್ನಡ ಶಾಲೆಗಳಿರುವುದು ಕಡ್ಡಾಯಗೊಳಿಸಬೇಕು.
ಗ್ರಾಮಾಂತರ ಪ್ರದೇಶಗಳಲ್ಲಿ ಮಕ್ಕಳಿಗೆ ಸರ್ಕಾರಿ ಶಾಲೆಗೆ ಸುರಕ್ಷಿತವಾಗಿ ಬರಲು ಬಸ್ಸುಗಳ ವ್ಯವಸ್ಥೆ,
ಮಧ್ಯಾಂತರದ ಊಟ ಉಪಹಾರ ಸಮವಸ್ತ್ರ ಕಲಿಕಾ ಸಾಮಗ್ರಿ ಎಲ್ಲವನ್ನೂ ಸರಿಯಾಗಿ ಒದಗಿಸುವುದರೊಂದಿಗೆ ಪಠ್ಯದ ಎಲ್ಲಾ ವಿಷಯಗಳಿಗೆ ಪರಿಣಿತ ಸಿಬ್ಬಂದಿ ಹಾಗೂ ಆ ಸಿಬ್ಬಂದಿಗೂ ಸರಿಯಾದ ವೇತನ,ವಸತಿ,ಸಾರಿಗೆ ಸೌಲಭ್ಯ ಒದಗಿಸಿದರೆ ಖಂಡಿತವಾಗಿಯು ಕನ್ನಡ ಸರ್ಕಾರಿ ಶಾಲೆಗಳಲ್ಲಿ ಉತ್ತಮ ಗುಣಮಟ್ಟದ ಶಿಕ್ಷಣ ಕೊಡುವುದರೊಂದಿಗೆ ಕನ್ನಡ ಶಾಲೆಗಳನ್ನು ನಿಸ್ಸಂದೇಹವಾಗಿ ಉಳಿಸಿ ಬೆಳೆಸಬಹುದು.
ಇದು ಸರ್ಕಾರದ ಜವಾಬ್ದಾರಿ ಆದರೂ ಇದು ಸಾರ್ವಜನಿಕರ ಕರ್ತವ್ಯವು ಆಗಿದೆ.ತಾವಿರುವ ಪ್ರದೇಶಗಳಲ್ಲಿ ಇರುವ ಸರ್ಕಾರಿ ಕನ್ನಡ ಶಾಲೆಗಳಿಗೆ ಮಕ್ಕಳನ್ನು ಕಡ್ಡಾಯವಾಗಿ ಕಳಿಸುವುದು ಕನ್ನಡದ ಕುಟುಂಬಗಳ ಜವಾಬ್ದಾರಿಆಗಿದೆ.
ನೀರು ಬಳಸಿ ದಷ್ಟು ಶುಧ್ಧವಾಗಿರುವಂತೆ ಭಾಷೆಯನ್ನು ಸರಿಯಾದ ಕ್ರಮದಲ್ಲಿ ಬಳಸಿ ಉಳಿಸಿ ಬೆಳೆಸಿದರೆ ಖಂಡಿತವಾಗಿಯು ಸಾವಿರ ವರ್ಷಗಳ ಇತಿಹಾಸ ಹೊಂದಿರುವ ಕನ್ನಡ ಭಾಷೆ ಸಾವಿರ ಶತಮಾನಗಳ ಹೊಸ ಇತಿಹಾಸ ನಿರ್ಮಿಸುವಲ್ಲಿ ಯಾವ ಸಂದೇಹವು ಇಲ್ಲಾ. ನಾವು ನಮ್ಮ ಮಕ್ಕಳನ್ನು ಪ್ರೀತಿಸುವಂತೆ ನಮ್ಮ ಮಾತೃಭಾಷೆ ಕನ್ನಡವನ್ನು ಪ್ರೀತಿಸೋಣ ಪ್ರೀತಿ ಇಂದ ಬೆಳೆಸೋಣ ಜೋಪಾನ ಮಾಡಿ ಉಳಿಸೋಣ.
ಅದಕ್ಕಾಗಿ ಕಡ್ಡಾಯವಾಗಿ ಎಲ್ಲಾ ವರ್ಗದ ಕನ್ನಡಿಗರು
ತಮ್ಮ ಮಕ್ಕಳನ್ನು ಕಡ್ಡಾಯವಾಗಿ ಸರ್ಕಾರಿ ಕನ್ನಡ ಶಾಲೆಗಳಿಗೆ ಕಳಿಸುವ ಪಣತೊಟ್ಟು ಕನ್ನಡ ಸರ್ಕಾರಿ ಶಾಲೆಗಳನ್ನು ಉಳಿಸಿ ಬೆಳೆಸುವಲ್ಲಿ ಕೈಜೋಡಿಸೋಣ.
ಏನಂತಿರೀ….


ಆಶಾ ಎಸ್ ಯಮಕನಮರಡಿ

One thought on “ಆಶಾ ಎಸ್ ಯಮಕನಮರಡಿ-ಸರ್ಕಾರಿ ಕನ್ನಡ ಶಾಲೆಗಳನ್ನು ಬಲಪಡಿಸುವುದು ಹೇಗೆ?

  1. ಆಶಾಜಿ ಖಂಡಿತ ನಿಮ್ಮ 7ನುಡಿಗಳು ಶತಪಥ ಸತ್ಯ .ಕನ್ನಡ ಶಾಲೆಗಳ ಉಳಿವಿಗಾಗಿ ನಾವು ಕನ್ನಡಿಗರು ಶ್ರಮಿಸೋನ

Leave a Reply

Back To Top