ಕಾವ್ಯ ಸಂಗಾತಿ
ಸುರೇಖಾ ರಾಠೋಡ್
ಪದಗಳು
ಪದಗಳು
ಸಂಬಂಧಗಳನ್ನು ಬೆಳೆಸುತ್ತವೆ,
ಹಾಳುಮಾಡುತ್ತವೆ,
ಮತ್ತೆ
ಮನಸ್ಸುಗಳನ್ನು ಒಡೆಯುತ್ತವೆ…
ಪದಗಳು..
ಕನಸುಗಳ ಕಾಣಿಸುತ್ತವೆ,
ಈಡೇರಿಸುತ್ತವೆ
ಆಸೆ ಹುಟ್ಟಿಸುತ್ತವೆ
ಮತ್ತೆ
ಚೂರು ಚೂರಾಗಿಯನ್ನಾಗಿ ಮಾಡುತ್ತವೆ
ಪದಗಳು
ಪ್ರೀತಿ ಹುಟ್ಟಿಸುತ್ತವೆ,
ಬೆಳೆಸುತ್ತವೆ,
ಪ್ರೀತಿಯಮಲಿನಲ್ಲಿ ತೇಲಿಸುತ್ತವೆ..
ಮತ್ತೆ..
ಹುಚ್ಚು ಹಿಡಿಸುತ್ತವೆ
ಪದಗಳು
ಅಶಕ್ತರನ್ನಾಗಿಸುತ್ತವೆ,
ಮತ್ತೆ
ಸಶಕ್ತರನ್ನಾಗಿಸಲು ಪ್ರೇರಣೆ ನೀಡುತ್ತವೆ….
ಪದಗಳು
ಗುರಿ ತಪ್ಪಿಸುತ್ತವೆ,
ಮತ್ತೆ
ಗುರಿ ತಲುಪಿಸುತ್ತವೆ
ಪದಗಳು
ಕರೆದೊಯ್ಯುತ್ತವೆ
ಅಜ್ಞಾನದಿಂದ ಜ್ಞಾನದಡೆಗೆ
ಮೂಢನಂಬಿಕೆಯಿಂದ
ಮತ್ತೆ
ವೈಚಾರಿಕತೆಯ ಕಡೆಗೆ ಕರೆದ್ಯೊಯುತ್ತವೆ
ಪದಗಳು
ಆತ್ಮ ಗೌರವವನ್ನು ಕೆಣಕುತ್ತವೆ,
ನೋಯಿಸುತ್ತವೆ.
ಯುದ್ಧ ಮಾಡಿಸುತ್ತವೆ
ಮತ್ತೆ
ಶಾಂತಿ ನೆಲೆಸುವಂತೆ ಕೂಡ ಮಾಡಿಸುತ್ತವೆ…
ಪದಗಳು
ಕವಿಯನ್ನಾಗಿಸುತ್ತವೆ
ಕವಿ ಭಾವವನ್ನು
ಹೇಳಿಕೊಳ್ಳುತ್ತವೆ..
ಮತ್ತೆ,
ಕವಿಯ ವ್ಯಕ್ತಿತ್ವವನ್ನು
ಪ್ರಶ್ನೆ ಮಾಡುತ್ತವೆ…
ಪದಗಳು
ಏನುಬೇಕಾದರೂ ಮಾಡಿಸುತ್ತೇವೆ.
ಸುರೇಖಾ ರಾಠೋಡ್
ಕವಿತೆಯ ಪದಗಳು ಓದಿದಾಗ ನನ್ನ ಅನಿಸಿಕೆ ಪದಗಳ ಹೊಂದಾಣಿಕೆ ಒಳ್ಳೆಯ ರೀತಿಯಾಗಿದ್ದು ಹಾಗೂ ಜೀವನದಲ್ಲಿ ಉಪಯುಕ್ತ ಎನಿಸುತ್ತದೆ
ಕವಿತೆಯ ಪದಗಳನ್ನು ಜೋಡಣೆ ಮಾಡಿದ ನಿಮಗೆ ತುಂಬಾ ಅಭಿನಂದನೆಗಳು