ಮುತ್ತು ಬಳ್ಳಾ ಕಮತಪುರ ಅವರ ಗಜಲ್

ಕಾವ್ಯ ಸಂಗಾತಿ

ಮುತ್ತು ಬಳ್ಳಾ ಕಮತಪುರ

ಗಜಲ್

ನೆನಪ ದಾರಿಯಲಿ ನಿತ್ಯ ಗೆಜ್ಜೆಯ ನಿನಾದವನು ಕೇಳುತಿರುವೆ
ಸರಿದ ಆ ಸಾವಿಲ್ಲದ ಪ್ರೀತಿಯ ಓಲೆಯನು ಬರೆಯುತಿರುವೆ

ಮಾತು ಮಾತಿಗೆ ನಗೆಯ ಮೂಡಿಸಿ ಹಗೆತನವ ಮರೆಸಿದೆಯೇಕೆ
ಭೇಟಿಯ ಸಮಯದಲಿ ಹೃದಯ ಪಲ್ಲವಿಯನು ಹಾಡುತಿರುವೆ

ಕಣ್ಣರಪ್ಪೆಗಳ ಬಡಿತ ಹೇಳದೆ ಉಳಿದವು ನೋವಿನ ಕಥೆಯಾ
ಪ್ರತಿ ನೋಟವೆ ಬನ ರಾಶಿ ರಾಶಿಯ ಪತ್ರಗಳನು ಎಣಿಸುತಿರುವೆ ||

ನಶೆಯ ಬಟ್ಟಲು ಖರೀದಿಸಿದರೂ ಆರೈಕೆ ಹೇಗೆ ಮರೆಯಲಿ
ಸತಾಯಿಸಿ ಸ್ವರ್ಗದ ಆ ಕೊನೆಯ ಬಯಕೆಯನು ತೀರಿಸಿರುವೆ

ಕನ್ನಡಿ ಬಿಂಬಕೂ ನಾಚಿಕೆ ನಿನ್ನ ರೂಪ ನನ್ನದವಲ್ಲವೆ ಮುತ್ತು
ಚಿಂತಿಸಿ ಚಿತ್ರಿಸುವ ದೃಶ್ಯ ಕಾವ್ಯದ ಒಸಗೆಯನು ಹುಡುಕುತಿರುವೆ


ಮುತ್ತು ಬಳ್ಳಾ ಕಮತಪುರ

Leave a Reply

Back To Top