ಕಾವ್ಯಸಂಗಾತಿ
ಈರಮ್ಮ.ಪಿ.ಕುಂದಗೋಳ
ಕಿತ್ತೂರಿನ ಹೆಣ್ಣು ಹುಲಿ
ಬ್ರಿಟಿಷರ ಸೆದೆ ಬಡಿಯಲೆಂದೇ
ಕಾಕತಿಯಲ್ಲಿ ಹೆಣ್ಣು ಹುಲಿ ಜನಿಸಿದಳು
ದೇಸಾಯಿ ಮನೆತನದಲ್ಲಿ,
ಲಿಂಗಾಯತ ಧರ್ಮದ ವೀರ ಮಹಿಳೆ
ರಾಣಿ ಚೆನ್ನಮ್ಮ.
ಬೆಳೆಯುವ ಸಿರಿ ಮೊಳಕೆಯಲ್ಲಿ
ಬಾಲ್ಯದಲ್ಲಿಯೇ ಕುದುರೆ ಸವಾರಿ,
ಕತ್ತಿ ಕಾಳಗ,ಬಿಲ್ಲುಗಾರಿಕೆಯಲ್ಲಿ ತರಬೇತಿ
ಪಡೆದು ವೀರತ್ವ ಮೆರೆದ ದೈರ್ಯವಂತ ಮಹಿಳೆ.
ರಾಣಿ ಚೆನ್ನಮ್ಮ.
ನಾರು ಮಡಿಯ ಉಟ್ಟು ಸಿಂಧೂರ ತಿಲಕದಿ
ಸಂಹಾಸನದ ಮೇಲೆ ನಗುವ ಚೆಲುವೆ
‘ಮಲ್ಲಸರ್ಜನ ‘ಮದುವೆಯಾಗಿ
ಬಂಧನದಲ್ಲಿ ಇದ್ದರು,
ಮಲ್ಲಸರ್ಜನ (ಪತಿಯ)ಮರಣದ ನಂತರ
ಕಿತ್ತೂರಿನ ಕೋಟೆಯ ಒಡೆತನ
ಮುಂದುವರಿಸಿದ ದಿಟ್ಟ ಮಹಿಳೆ.
ರಾಣಿ ಚೆನ್ನಮ್ಮ.
ಕಿತ್ತೂರಿನ ಮನೆತನಕ್ಕೆ ಮಕ್ಕಳಿಲ್ಲದ
ಕಾರಣ,ಶಿವಲಿಂಗಪ್ಪನ್ನು ದತ್ತಕ ಮಗನನ್ನು
ಮಾಡಿಕೊಂಡಳು,ಕಿತ್ತೂರಿನ ಮನೆತನ
ಬೆಳಗಿಸಿದ ವೀರವನಿತೆ.
ರಾಣಿ ಚೆನ್ನಮ್ಮ.
“ದತ್ತು ಮಕ್ಕಳಿಗೆ ಹಕ್ಕಿಲ್ಲ “ಕಾಯಿದೆಯ
ವಿರುದ್ಧ ಹೋರಾಡಿ,
ಆಂಗ್ಲರ ವಿರುದ್ಧ ಹೋರಾಟ ಮಾಡಿದ
ಮೊದಲ ಕನ್ನಡದ ಧೀರೆ
ರಾಣಿ ಚೆನ್ನಮ್ಮ.
ಬ್ರಿಟಿಷರ ವಿರುದ್ದ ಮೊದಲ ದಂಗೆಯಲ್ಲಿ ಆಕ್ರೋಶದಿಂದ,ಛಲದಿಂದ
ವೈರಿ ಪಡೆಯನ್ನು ಸದೆ ಬಡಿದು,
ಹೆಣ್ಣು ಹುಲಿಯಂತೆ ಯುದ್ದ ಮಾಡಿ ಗೆದ್ದಳು
ಜಯ ಸಾಧಿಸಿದ ಛಲಗಾರ್ತಿ.
ರಾಣಿ ಚೆನ್ನಮ್ಮ.
ಅವಳನ್ನು ಎದುರಿಸಲಾಗದೆ
ಪರಂಗಿಯರ ಸರ್ಕಾರಕ್ಕೆ ಜಗ್ಗದ ದಿಟ್ಟ ಮಹಿಳೆಯಾದಳು,
ಇದನ್ನು ಅರಿತ ಪರಂಗಿಗಳು ವಿಜಯದಶಮಿಯ
ಹಬ್ಬ ದಿನದಿ ಮೋಸದಿಂದ ಚೆನ್ನಮ್ಮಳ ಸೆರೆ ಹಿಡಿದರು
ಕಪಟಕ್ಕೆ ಒಳಗಾದ ಚೆನ್ನಮ್ಮ ಬೈಲಹೊಂಗಲದ
ಸೆರೆಮನೆಯಲ್ಲಿ ಸೆರೆಯಾಗಿ ಕೊನೆಯುಸಿರು ಎಳೆದಳು.
ದೇಶಭಕ್ತಿ ಮೆರೆದಳು ರಾಣಿ ಚೆನ್ನಮ್ಮ.
ಆಕೆಯ ಎದುರಿಗೆ ಹೋರಾಡದೆ
ಮೋಸ ಮಾಡಿದ ಬ್ರಿಟಿಷರಿಗೆ “ಕಿತ್ತೂರಿನ ಕೋಟೆ ಕಟ್ಟಿದ ಗಟ್ಟಿಗಿತ್ತಿ,” ಕಿತ್ತೂರಿನ ಹೆಣ್ಣು ಹುಲಿ ಚೆನ್ನಮ್ಮ”
ಎಂದು ಜಗತ್ತಿಗೆ ಸಾರಿದ ವೀರಮಹಿಳೆ
ನಮ್ಮ ಕನ್ನಡ ನಾಡಿನ ಹೆಮ್ಮಯ ನಾರಿ.
ರಾಣಿ ಚೆನ್ನಮ್ಮ! ರಾಣಿ ಚೆನ್ನಮ್ಮ!
ಈರಮ್ಮ.ಪಿ.ಕುಂದಗೋಳ