ಮನ್ಸೂರ್ ಮುಲ್ಕಿ ಕವಿತೆ ಬಾಲ್ಯ

ಕಾವ್ಯ ಸಂಗಾತಿ

ಮನ್ಸೂರ್ ಮುಲ್ಕಿ

ಬಾಲ್ಯ

ನಿನ್ನ ಪಾದದ ತುಳಿತವದು ನನ್ನ ಎದೆಯಾಳದಲ್ಲಿಯೇ ನಿಂತಿಹುದು
ಪುಟ್ಟ ಕಂದನ ನಗುವಿನಲಿ ನಾನು
ಕೂಡ ಮಗುವಾಗಿಹೆನು

ಬಾಲ್ಯದ ನೆನಪದು ನೆನೆದರೂ ಹಾಗೆ
ಮನಸ್ಸಿನ ಆಳದಿ ಮಲಗಿಹುದು
ಯೋಚಿಸಲಾಗಾದೆ ಯಾಚಿಸಿಕೊಂಡ
ಬಾಲ್ಯದ ನೆನಪದು ಬಲು ಚಂದ

ಗೆಳೆಯರ ಜೊತೆಯಲ್ಲಿ ಗೆಲುವಿನ ಆಟದಿ
ಕೂಡಿ ನಡೆದ ನಡೆ ಏನ್ ಅಂದ
ತರಗತಿಯೊಳಗೆ ತರಲೆಯ ಮಾಡುತ
ನಗುವನ್ನು ಬರಿಸಿದ ನುಡಿ ಚಂದ

ಕಿವಿಯಲ್ಲಿ ಉಸಿರಿದ ಮಾತಿನ ಗುಟ್ಟನ್ನು
ಕೇಳಿದ ಗೆಳೆಯ ಅವನೇನಂದ
ಗುಟ್ಟನ್ನು ಬಿಡಿಸಲು ಹಠವನ್ನು ಹಿಡಿದು
ಇದೇನ ಗುಟ್ಟು ಠುಸ್ಸೆಂದ.


ಮನ್ಸೂರ್ ಮುಲ್ಕಿ

Leave a Reply

Back To Top