ಅಮುಭಾವಜೀವಿ ಮುಸ್ಟೂರು-ಬರದ ತನಗ

ಕಾವ್ಯ ಸಂಗಾತಿ

ಅಮುಭಾವಜೀವಿ ಮುಸ್ಟೂರು-

ಬರದ ತನಗ

ಬರದ ಬೇಗೆಯಲ್ಲಿ
ಬಂಜೆಯಾಯ್ತು ಭೂಮಿಯು
ಬೆವರು ಸುರಿಸಿದ
ರೈತನ ಕೈ ಖಾಲಿಯು

ಮೋಡವು ಹಡೆಯದೆ
ಮಳೆಯು ಬರಲಿಲ್ಲ
ನಿಗೂಢ ನಿಸರ್ಗದ
ಮರ್ಮ ತಿಳಿಯದಲ್ಲ

ಬಾಯಾರಿದ ಜೀವವು
ಹಂಬಲಿಸಿದೆ ನೀರ
ಬೇಸಿಗೆಯ ಬಿಸಿಲು
ತಾನೇ ಹೀರಿದೆ ಪೂರ

ಭೂತಾಯಿ ಕೈಚೆಲ್ಲಲು
ಮಕ್ಕಳಾದ್ರು ಕಂಗಾಲು
ಹೀಗಾದರೆ ಮುಂದೇನು
ಮರೆತಾರು ಒಕ್ಕಲು

ಬರ ನೀ ದೂರ ಓಡು
ನೋಡಲಾಗ್ತಲ್ಲೀ ಪಾಡು
ಆಹಾಕಾರ ಎದ್ದಿದೆ
ಕಣ್ಬಿಟ್ಟು ಇಲ್ಲಿ ನೋಡು

ಮಳೆಯು ಸುರಿಯಲಿ
ಹಸಿರು ಮೆರೆಯಲಿ
ರೈತರು ಉಳಿಯಲಿ
ಹಸಿವು ಮುಕ್ತವಾಗಲಿ

———————————–

ಅಮುಭಾವಜೀವಿ ಮುಸ್ಟೂರು

Leave a Reply

Back To Top