ಕಾವ್ಯ ಸಂಗಾತಿ
ಡಾ.ಶಶಿಕಾಂತ.ಪಟ್ಟಣ ರಾಮದುರ್ಗ
‘ಅಲ್ಲ ಅವಳು’


ಅಲ್ಲ ಅವಳು
ಬದುಕ ನೂಕಿದವಳು
ಅಸನಕ್ಕೆ ಬಳಲದವಳು .
ತುಡಿತಕ್ಕೆ ಕುದಿಯದವಳು.
ಸೋತೆನೆಂದು ಮರುಗದವಳು.
ಕಣ್ಣ ತುಂಬಾ ಕನಸು
ನುಡಿಯುವ ನಡೆಯುವ
ಸ್ವಚಂದ ಮನಸು
ಭಾವ ಶುದ್ಧ ನೋಟ
ಅಸ್ಮಿತೆಯ ನಯನ
ಮುಗ್ಧ ನಗೆ ಗುಳಿ ಗಲ್ಲ
ದೂರ ಪಯಣಕೆ ಹೆಜ್ಜೆ
ಬದುಕಿದ್ದಾಳೆ ಸತ್ಯದಲಿ
ಗೆಲುವಾದಳು
ವಿಷಯಗಳ ಕೊಂದು.
ಅಲ್ಲ ಅವಳು
ಹೀಗೆ ಬದುಕ ನೂಕಿದವಳು
ಡಾ.ಶಶಿಕಾಂತ.ಪಟ್ಟಣ ರಾಮದುರ್ಗ

ಅಲ್ಲ ಅವಳು
ಬದುಕ ನೂಕಿದವಳು
ಅಸನಕ್ಕೆ ಬಳಲದವಳು
ತುಡಿತಕ್ಕೆ ಕುದಿಯದವಳು
ಸೋತೆನೆಂದು ಮರುಗದವಳು
ಸ್ತ್ರೀಕುಲದ ಬದುಕಿನ ನೋಟ… ಮಾರ್ಮಿಕವಾಗಿ ಮೂಡಿಬಂದಿದೆ
ಸುಶಿ
ಅಸ್ಮಿತೆಯ ಅರಳು ಪೋಷಿಸಿದ ಸ್ಪೂರ್ತಿದಾಯಕ… ಪ್ರೇರಣಾದಾಯಕ ಕವನ ದವನ ನುಡಿ ಮುತ್ತುಗಳಿಗೆ…ಸೂಕ್ಷ್ಮ ಸಂವೇದನಾಶೀಲ ಕವಿ ಹೃದಯಕೆ..ಹೂ ಮನಸಿಗೆ….ತುಂಬು ಹೃದಯದ ನೂರೊಂದು ನಮನಗಳು….