ಕಾವ್ಯ ಸಂಗಾತಿ
ಅಕ್ಕಮಹಾದೇವಿ
ಬೆಳದಿಂಗಳ ಬಾಲೆ
ಬೆಳದಿಂಗಳ ನೋಡಾ
ಹಾಲು ಚೆಲ್ಲಿದಂಗ ‘
ಬಾಲೆಯ ರಂಗೋಲಿ ನೋಡಾ ಕಣ್ಮನ
ಸೆಳೆಯುವುದು,
ಆ ನುಗು
ಆ ನೋಟ
ಅಬ್ಬಾ..
ಕಣ್ಣಲ್ಲಿ ಯಾರನ್ನೊ
ಹುಡುಕುತಿದೆ.
ರಂಗೋಲಿಯಲ್ಲಿ ಆ ಬಿಂಬ ಕಾಣುತ್ತ
ನಸುನಗುವಳು
ಆ ಕಡೆ ಈ ಕಡೆ ನೋಡಿ ನಗುವಳು
ಕಾಣದಿದ್ದಾಗ
ಹುಸಿ ಮುನಿಸು
ಬೆಳದಿಂಗಳ ಬಾಲೆ
ಬೆಳ್ಳನೆ ಸುಂದರ ಚೆಲುವೆ
ನಿನ್ನ ರೂಪಕ್ಕೆ ಮನಸೋತವರು
ಅದೆಷ್ಟೊ ಜನ
ಎಲ್ಲರ ಮನ ಸೂರೆಗೊಂಡವಳು
ಹಾ ಬಾಲೆ; ಓಡಬೇಡ ನಿಲ್ಲು ನಿಲ್ಲು ನೀ…….
ಅಕ್ಕಮಹಾದೇವಿ
ಬಹಳ ಅದ್ಬುತವಾದ ಕವನ ರಚನೆ