ಅನುರಾಧಾ ರಾಜೀವ್ ಸುರತ್ಕಲ್-ಗಜಲ್

ಕಾವ್ಯ ಸಂಗಾತಿ

ಅನುರಾಧಾ ರಾಜೀವ್ ಸುರತ್ಕಲ್-

ಗಜಲ್

ಒತ್ತಡದ ಬದುಕಿನ ನಡುವೆ ಭಾವನೆ
ಹಂಚುತ ಬರೆಯಲಾಗದು
ಚಿತ್ತವನು ಕಲಕಿದ ಜನರ ಜೊತೆಗೆ
ಒಂದಾಗಿ ಬೆರೆಯಲಾಗದು

ಹೊತ್ತಿರುವ ಬೆಂಕಿಯ ಜ್ವಾಲೆಯನು
ನೀರ ಹಾಕುತ ಆರಿಸಲಾದೀತೇ
ಸತ್ತಿರುವ ಆಸೆಗಳ ಪರಿಧಿ ಮೀರುತ
ವ್ಯಕ್ತಿತ್ವ ತೆರೆಯಲಾಗದು

ಸುತ್ತಲಿನ ಪರಿಸರದ ನೋಟಕೆ ಕಾರಣ
ಕೊಡುವ ಅಗತ್ಯವಿಲ್ಲ
ಬಿತ್ತಿರುವ ‌ಸಂಶಯದ ಬೀಜವ ಬಿತ್ತಲು
ಮನಸ ಕೊರೆಯಲಾಗದು

ಮುತ್ತಿರುವ ಸಂಕಟದ ರಾಶಿಯ ಮರಳಿ
‌ಬರದಂತೆ ಚೆಲ್ಲಬೇಕು
ಕೆತ್ತಿರುವ ಶಿಲೆಯಲಿ ಜೀವವೇ ಇರದಿರೆ
ಸತ್ವವ ಅರೆಯಲಾಗದು

ಸಾತ್ವಿಕತೆ ಮೆರೆದು ರಾಧೆಯು ಮೌನವೇ
ಸೂಕ್ತ ಎಂದಿಹಳು
ಮತ್ತಿನಲಿ ವಿಚಾರ ಮಾಡಿ ಮಿಂದವರ
ರಂಗನೂ ಪೊರೆಯಲಾಗದು


ಅನುರಾಧಾ ರಾಜೀವ್ ಸುರತ್ಕಲ್

Leave a Reply

Back To Top