ಕಾವ್ಯ ಸಂಗಾತಿ
ಪರಿಮಳ ಐವರ್ನಾಡು ಸುಳ್ಯ-
ಸಂಗಾತಿ
ಸಂಗಾತಿ ನಿನ್ನಪ್ಪುಗೆಯಲ್ಲಿ
ಕನಸುಗಳೆಲ್ಲಾ ಕಾವ್ಯವಾಗಿದೆ
ಒಂದಿಷ್ಟು ಕವನಗಳು
ನೂರಾರು ಭಾವನೆಗಳು
ನಿನ್ನಯ ಮಡಿಲಲ್ಲಿ ನಾನಿರಿಸಿದೆ
ಮಗುವಂತೆ ನೀನು ಸಾಕಿ ಸಲಹಿದೆ
ಐದು ವರುಷದ ಹಸುಳೆಯಾದರೂ
ಆಕಾಶದಂತೆ ಅನಂತವಾಗಿರುವೆ
ಬೆಟ್ಟದಷ್ಟು ಜವಾಬ್ದಾರಿ ನಿನ್ನದು
ಕಡಲಿನಷ್ಟು ಪ್ರೀತಿ ನಿನ್ನದು
ಕವಿಗಳನ್ನು ಸಲಹುವಾತ
ಕವಿಯಿತ್ರಿಯರಿಗೆ ಆಶ್ರಯದಾತ
ಕನ್ನಡ ನುಡಿಯನು ಬೆಳೆಸುವನೀತ
ಲೇಖನಗಳನ್ನು ಬಿತ್ತರಿಸಿ
ಚಿಂತನೆಗಳನ್ನು ಚಿತ್ರಿಸಿ
ವಿಮರ್ಶೆಗಳನ್ನು ವಿನ್ಯಾಸಗೊಳಿಸಿ
ಕವಿತೆಗಳಿಗೆ ಕಂಪು ಬೆರೆಸಿ
ಓದುಗರ ಮನ ಮುಟ್ಟಿಸಿ
ಜಗವೆಲ್ಲಾ ಕೊಂಡಾಡಿಸಿದೆ
ಕಾವ್ಯಾಸಕ್ತರಿಗೆ ಕರಜೋಡಿಸುವೆ
ಸಾಹಿತ್ಯಾಸಕ್ತರನು ಪೋಷಿಸುವೆ
ನಂಬಿದವರನು ಹರಸುವೆ
ಜಾತಿ ಬೇಧವಿಲ್ಲದೆ ಬೆಳೆಸುವೆ
ಅಕ್ಷರಗಳ ದೀಪ ಬೆಳಗುವೆ
ಅನುಗಾಲವು ಕಾಪಾಡುವೆ
ನಿನಗೆ ನಾನು ಶರಣೆಂದೆ
ನಾ ನಿನ್ನ ಸಖಿಯೆಂದೆ
ನಿನಗಿಲ್ಲ ಯಾರೂ ಸಾಟಿ
ನಿನಗೆ ನೀನೇ ಸರಿಸಾಟಿ
ನಿನ್ನ ಸೇವೆಗೆ ಶುಭಕೋರುವೆ
ಇತಿಹಾಸ ಸೃಷ್ಟಿಸೆಂದು ಹಾರೈಸುವೆ
ಪರಿಮಳ ಐವರ್ನಾಡು ಸುಳ್ಯ