ಕಾವ್ಯ ಸಂಗಾತಿ
ಭಾರತಿ ಅಶೋಕ್
ಇದು ಬರಿ ರಾತ್ರಿಯಲ್ಲ.
ಕೇವಲ ನಾನಂದುಕೊಂಡ
ರಾತ್ರಿಯಾಗಿರಲಿಲ್ಲ ಅದು!
“ಈ ‘ರಾತ್ರಿ’ಯಾದರೂ
ಯಾಕೆ ಬೇಕಿತ್ತು” ಎಂದು
ಅಗಾಗ ಭಾರವಾದ ಉಸಿರಿನೊಂದಿಗೆ ಹೊರ ಬರುವ ಅವಳ ಮಾತಿನ ನಿಹಿತ
‘ರಾತ್ರಿ’ ಬರೀ ರಾತ್ರಿಯಲ್ಲ,
ಅವಳು ಯಾವುದನ್ನು
ರಾತ್ರಿ ಎನ್ನುತ್ತಾಳೆ?
ಅದೆಂಥ ಘನಗೋರವಾದ ರಾತ್ರಿ ಇರಬಹುದು.
ಆ ಕರಾಳ ರಾತ್ರಿ ಅವಳ
ಬದುಕನ್ನು ಹೇಗೆ ದಹಿಸಿರಬಹುದು
ಊಹೂಂ …
ಕಲ್ಪನೆಗೆ ನಿಲುಕದು
ಹಾಗಾದರೆ ಅವಳು
ಹಗಲನ್ನು ಕಂಡಿರುವುದು ಹೇಗೆ!
ಹಗಲೆಂದರೆ ಏನಿರಬಹುದು
ಏ ದೇವ
ನೀನಿರುವುದೇ ಆದರೆ
ಅವಳಿಗೆ ಬರೀ ಹಗಲನ್ನೇ ಕರುಣಿಸು
ಇಲ್ಲವೇ ಕರಾಳ ರಾತ್ರಿಯನ್ನೇ ಅವಳಿಚ್ಚೆಯ ಹಗಲನ್ನಾಗಿಸು
ಭಾರತಿ ಅಶೋಕ್
ಅಲೋಚನೆಗೆಳಸುವ ಕವಿತೆ