ಇಂದಿರಾ ಮೋಟೆಬೆನ್ನೂರ-ಭಾವಗಳು

ಕಾವ್ಯ ಸಂಗಾತಿ

ಇಂದಿರಾ ಮೋಟೆಬೆನ್ನೂರ

ಭಾವಗಳು

ನಾನು ನೀನು
ಯಾವ ಜನ್ಮದ ಬಂಧ
ಯಾವ ಪುಣ್ಯದ ಫಲ
ಯಾವ ದೇವರ ವರ
ಅರಿಯೇ ನಾನು
ಜೊತೆಯಾದೆವು
ದೂರ ದಾರಿಯ
ಪಯಣದಿ…
ನೀನು ಬಿತ್ತಿದ ಭಾವ
ನೂರು ತೆನೆಯ
ಸಾವಿರ ಗಾನ
ಕನಸು ನನಸು
ನೋವು ನಲಿವು
ಜೀವ ಭಾವ
ಮುನಿಸು ರಮಿಸು
ಮಾತು ಮೌನ
ನಗು ಅಳುವು
ಸ್ನೇಹ ಪ್ರೀತಿ
ಸಿಹಿಯ ಪಯಣ
ನೆನಪು ದವನ
ನಿತ್ಯ ಕವನ
ನಲಿವ ಮನ
ಹೂ ಬನ
ಭಾವ ನಯನ
ಹೃದಯ ಮಿಡಿತ
ರಾಗ ತಾಳ
ಪ್ರೀತಿ ಮೇಳ
ಅನುದಿನ….


ಇಂದಿರಾ ಮೋಟೆಬೆನ್ನೂರ.

3 thoughts on “ಇಂದಿರಾ ಮೋಟೆಬೆನ್ನೂರ-ಭಾವಗಳು

Leave a Reply

Back To Top