ಮನ್ಸೂರ್ ಮುಲ್ಕಿ ಕವಿತೆ-ಚೆಲುವೆ

ಸಂಗಾತಿ ವಾರ್ಷಿಕ ವಿಶೇಷಾಂಕ

ಮನ್ಸೂರ್ ಮುಲ್ಕಿ ಕವಿತೆ-

ಚೆಲುವೆ

ನನ್ನ ಬರಹ ನಿನ್ನ ತರಹ
ಪ್ರೇಯಸಿಯೇ ನಾ ಯಾವ ತರಹ
ನನ್ನ ಬರಹಕೆ ನಿನ್ನ ನಗುವು
ತಂತು ನನಗೆ ತಂಗಾಳಿ ತಂಪು

ಹೃದಯದ ಮಾತಲ್ಲಿ ಏನೋ ಅಡಗಿದೆ
ನಿನ್ನ ಸಂದೇಶ ಅಲ್ಲಿ ಹಾಯಾಗಿ ಕುಳಿತಿದೆ
ಹೃದಯವು ನಿನ್ನನೇ ಕಾಯುತಿದೆ
ನನ್ನ ಹೃದಯವು ಎಲ್ಲಿ ಸೋತಿದೆ

ಬರದಿರಲು ಯಾಕೆ ನೀ ಹೇಳು
ನನ್ನ ಹೃದಯದ ಮಾತನು ಕೇಳು
ಅಳತೆಗೂ ಮೀರಿದ ನೋವು ತುಂಬಿದೆ
ಒಮ್ಮೆ ತಬ್ಬಿಕೋ ಎಂದು ಹೃದಯ ಹೇಳಿದೆ

ನನ್ನ ಚೆಲುವೆಯು ನೀನೇ ಪ್ರೇಯಸಿ
ಹೇಗೆ ಬದುಕಲಿ ನಿನ್ನ ಕಾಯಿಸಿ
ಬೇರೆ ಏನಿದೆ ನನ್ನ ಬದುಕಲಿ
ಇರುವೆ ಹೀಗೆನೇ ನಿನ್ನ ನಗುವಿನಲಿ


ಮನ್ಸೂರ್ ಮುಲ್ಕಿ

Leave a Reply

Back To Top