ಮುಚ್ಚಿದ ಬಾಗಿಲು-ತೆರೆಯದ ಕಿಟಕಿ

ಮಾಲತಿಹೆಗಡೆಯವರ ಹೊಸ ಅಂಕಣ, ಪ್ರತಿನಿತ್ಯ ಪ್ರಕಟವಾಗಲಿದೆ

ಮುಚ್ಚಿದ ಬಾಗಿಲು-ತೆರೆಯದ ಕಿಟಕಿ

ಭಾಗ-8

India advises states to curtail mass migration amid lockdown ...

ತೆಗೆದೀತೆ ದುಡಿಮೆಯ ಬಾಗಿಲು?

ನಾಲ್ಕು ವರ್ಷಗಳ ಕೃಷಿ ಲೇಖನಗಳ ಸರಣಿ ಬರಹಕ್ಕಾಗಿ ಹಲವು ಹಳ್ಳಿಗಳ ರೈತರನ್ನು ಸಂದರ್ಶಕ ಮಾಡಿದ್ದೆ. ಎಲ್ಲ ರೈತರೂ ಕಾರ್ಮಿಕರ ಕೊರತೆಯನ್ನೆದುರಿಸುತ್ತಿರುವ ವಿಷಯ ಹೇಳುತ್ತಿದ್ದರು. ಯಾಕೆ ಎಲ್ಲ ಹಳ್ಳಿಗಳಲ್ಲಿಯೂ ಹೀಗೆ? ಎಂದು ಕಾರ್ಮಿಕರನ್ನು ವಿಚಾರಿಸಲಾರಂಭಿಸಿದೆ. ನಗರದ ಅಂಚಿನ ಹಳ್ಳಿಯಲ್ಲಿ ವಾಸಿಸುವ ಕಾರ್ಮಿಕರು ಕೃಷಿ ಭೂಮಿಯಲ್ಲಿ ದುಡಿಯುವುದಕ್ಕಿಂತ ನಗರಗಳಲ್ಲಿ ಕೆಲಸಕ್ಕೆ ಹೋದರೆ ಕೂಲಿ ಹೆಚ್ಚು ಸಿಗುತ್ತದೆ ಎಂದು ಲೆಕ್ಕ ಹಾಕಿ ದಿನವೂ ನಗರಕ್ಕೆ ಹೋಗುತ್ತಿದ್ದರು. ಅವರಲ್ಲಿ ನಗರದ ಸಿನಿಮಾ, ತಿಂಡಿ ತಿನಿಸು, ವೇಷಭೂಷಣ, ವ್ಯಸನ .. ಹೀಗೆ ಹಲವು ಆಮಿಷಕ್ಕೆ ಮರುಳಾದ ಮನಸ್ಥಿತಿಯೂ ಇತ್ತು. ಇನ್ನೂ ಕೆಲವು ಹಳ್ಳಿಗಳು ವಲಸೆ ಮನಸ್ಥಿತಿಯವು. ಮಳೆಗಾಲದಲ್ಲಿ ಊರಿನಲ್ಲಿ ಇದ್ದರೆ ನಂತರ ಇಡೀ ಹಳ್ಳಿಯಲ್ಲಿ ದುಡಿಯುವಷ್ಟು ಗಟ್ಟಿ ಇದ್ದವರೆಲ್ಲ ಮಹಾನಗರಕ್ಕೆ ಗುಳೆ ಹೋಗುತ್ತಿದ್ದರು. ಒಮ್ಮೆ ಕಾರ್ಮಿಕ ಮಹಿಳೆಯೊಬ್ಬಳು ಅವರ ಜೀವನವನ್ನು ಹೀಗೆವಿವರಿಸಿದಳು..ದೀಪಾವಳಿ ಮುಗಿತಂದ್ರೆ ಗೋವಾ, ಮುಂಬೈ, ಬೆಂಗಳೂರಿಗೆಲ್ಲ ಕೆಲಸಾ ಹುಡುಕಿ ಹೊಂಟಬಿಡ್ತೇವ್ರಿ. ಗಂಡನನ್ನು ಮಾತ್ರ ಕಳಿಸಿದ್ರೆ ಚಟಕ್ಕ ಬಿದ್ದು, ಬ್ಯಾರೆ ಹೆಣ್ಣಿನ ಕೂಡ ಜೀವ್ನಾ ಮಾಡಿದ್ರೇನು ಗತಿ. ನಮ್ಮನ್ನ ಮಕ್ಕಳನ್ನ ನೋಡುವವರಾರು? ಅಂದ್ಕೊಂಡು ವಯಸ್ಸಾದ ಅತ್ತಿ ಮಾವ ಇಲ್ಲ ಅಪ್ಪಾ ಅವ್ವಾನಗೂಡ ಮಕ್ಕಳನ್ನು ಊರಿನಲ್ಲಿಯೇ ಬಿಟ್ಟು ಹೊರಟುಬಿಡ್ತೇವ್ರೀ. ಬ್ಯಾಸಿಗಿ ಮುಗಿಯೂ ಟೇಮ್ಗ ಕೈಯಾಗ ಒಂದಿಷ್ಟು ಕಾಸು ಕೂಡಿಸಿಕೊಂಡು ಹೊಳ್ಳಿ ಬರ್ತೇವ್ರೀ. ಯಾವ ನಗರಕ್ಕೆ ಹೋದರೂ ಒಂದು ಬಾಡಗಿ ಮನಿ ಹಿಡಿಯುವಷ್ಟು ರೊಕ್ಕ ನಮ್ಮ ಕಡಿಗ ಆಗಂಗಿಲ್ಲ.ಅರ್ಧ ಕಟ್ಟಿದ ಕಟ್ಟಡ, ರೇಲ್ವೆ ಸ್ಟೇಷನ್ನು, ಸೇತುವೆಯ ಕೆಳಭಾಗ, ಕೊಳಗೇರಿಗಳಲ್ಲೆಲ್ಲೋ ಇರಬೇಕಾಗ್ತದೆ. ಇದ್ದೂರಾಗ ಗಳಿಸಾಕ ಅವಕಾಶ ಇದ್ರೆ ನಾವ್ಯಾಕ ಹಿಂಗ ತಿರುಬೋಕಿಗಳಾಗುತ್ತಿದ್ದೆವು….

Informal sector workers not registered, officials flag problems in ...


ಲಾಕ್ ಡೌನ್ ಮಾಡಿದಾಗ ಇದ್ದ ನಗರದಲ್ಲೇ ಇರಲಾಗದೇ ಸ್ವಂತ ಊರಿಗೆ ಬರಲೂ ಆಗದೇ ಪರದಾಡಿದವರ ಸ್ಥಿತಿ ಕರುಣಾಜನಕವಾದದ್ದು. ಅನೇಕ ಸಂಘ ಸಂಸ್ಥೆಗಳು, ಸರಕಾರ ಇವರಿಗೆ ಹಲವು ಬಗೆಯಲ್ಲಿ ನೆರವಾದರೂ ಅನೇಕರಿಗೆ ಕಷ್ಟವಾಯಿತು. ಕೆಲವರು ನೂರಾರು ಮೈಲಿ ನಡೆದಾದರೂ ಊರು ತಲುಪಿಬಿಡಬೇಕೆಂದು ಪ್ರಯತ್ನ ಮಾಡಿ ಜೀವ ತೆತ್ತರು.

With lives, livelihood at stake, India plans 'graded' exit from ...


ಈಗಲೂ ಹೇರಳವಾದ ಅವಕಾಶಗಳಿರುವ ಕೃಷಿಕ್ಷೇತ್ರದಲ್ಲಿ ದುಡಿಯಲು ಕಾರ್ಮಿಕರು ಮನಸ್ಸು ಮಾಡಿದರೆ ಇದ್ದ ಊರಿನಲ್ಲಿ, ಸುತ್ತ ಮುತ್ತಲ ಊರಿನಲ್ಲಿ ಅನೇಕ ಕಾರ್ಮಿಕರಿಗೆ ಕೆಲಸ ದೊರೆಯುತ್ತದೆ. ಮೂಲಭೂತ ಸೌಕರ್ಯಗಳ ಕೊರತೆ ಎದುರಿಸುತ್ತ ಇವರೆಲ್ಲ ನಗರಕ್ಕೆ ದೌಡಾಯಿಸುವುದಕ್ಕೆ ಪರ್ಯಾಯವಾಗಿ ವಲಸೆ ಕಾರ್ಮಿಕರು ಇರುವ ಸ್ಥಳಗಳನ್ನು ಗುರುತಿಸಿ ಸರಕಾರ ಅಥವಾ ಉದ್ಯಮಿಗಳು ಉದ್ಯಮ ಸ್ಥಾಪಿಸಿ ಉದ್ಯೋಗ ಸೃಷಿ ಆದರೆ ಅನೇಕ ಕಾರ್ಮಿ ಕರು ನೆಮ್ಮದಿಯಿಂದ ಬದುಕುವಂತಾಗಬಹುದು. ಚಿಂದಿಯಾಗಿರುವ ಅವರ ಸಂಸಾರಗಳು ಸುಖ ಕಾಣಬಹುದು..

*********

ಮುಂದುವರಿಯುತ್ತದೆ

ಮಾಲತಿ ಹೆಗಡೆ

Leave a Reply

Back To Top