ಸಂಗಾತಿ ವಾರ್ಷಿಕ ವಿಶೇಷಾಂಕ
ಮೋಹನ್ ಬಸಪ್ಪನಾಯಕ
ದೊಡ್ಡವರ ಹಟ್ಟಿ…..!
ದುಃಖ ದುಗುಡಗಳ
ದೂರದ ಬೆಟ್ಟಗಳಾಗಿ
ಇರಿಸಬಹುದಿತ್ತೇನೋ…,
ದೊಡ್ಡವರ ಹಟ್ಟಿಯವ
ನಾನಾಗಿದ್ದರೆ……!
ಅವಮಾನ, ನೋವುಗಳ
ಹೆಣೆದ ಬಡತನದ
ಬೇಲಿಯ ಸುಲಭದಿ
ಸೀಳಿ ನಲಿಯಬಹುದಿತ್ತು….,
ಪಳಪಳ ಎನ್ನುವ
ಮಹಡಿ, ಬಂಗಲೆಯ ಒಡೆಯರ
ಹೊಟ್ಟೆಯಲಿ ಹುಟ್ಟಿದ್ದರೆ…..,
ಜಗವ ಕಂಡು ಬಯಕೆ
ತಾಳುವಾಗ ಕಾಸಿಲ್ಲವೆಂದು
ನೆಪದಲ್ಲೇ ಬೇಯುವ
ಆ ಬಯಕೆಗಳ
ಉಳಿಸಿಕೊಳ್ಳಬಹುದಿತ್ತು..,
ಕಾಸಿನಲೇ ತೇಲಾಡುವ
ದೊಡ್ಡವರ ಹಟ್ಟಿಯಾತ ನಾನಾಗಿದ್ದಾರೆ……..!
ನಿತ್ಯ ಹುಟ್ಟಿ ಸಾಯುವ
ಚಿಂತೆಗಳ ಹೊಸಕಿ
ಹೊಸ ಹೊಸ ಕನಸುಗಳ
ನೇಯ್ಯುತ್ತ ಇರಬಹುದ್ದಿತ್ತು…,
ಬಡವನ ಬದಲಾಗಿ
ಶ್ರೀಮಂತನೆಂಬ ಹೆಸರು
ನನಗೂ ಇದ್ದಿದ್ದರೇ……..!
ಮೋಹನ್ ಬಸಪ್ಪನಾಯಕ