ಸಂಗಾತಿ ವಾರ್ಷಿಕ ವಿಶೇಷಾಂಕ
ವಿದ್ಯಾಶ್ರೀ ಅಡೂರ್
ಮಳೆಯೆoಬ ಹಳೆಯ ಗೆಳತಿ
ಮಳೆಯು ಮಾತಾಡುತಿಹುದು ಹಳೆಯ ಗೆಳತಿ ತರಹ
ತಂಪ ಸಿಂಚನವು, ಇಂಪ ರಿಂಗಣವು ತೆರೆಯುತೆದೆಯ ಬರಹ..
ಕಿವಿಯ ಬಳಿಯಲ್ಲೇ ಕುಲುಕಿ ಕುಳಿಗಾಳಿ ಸನ್ನೆ ಶುರುಮಾಡಿದೆ
ಕಂಪ ಸೂಸುತಿದೆ ನೆನಪ ಮಕರಂದ ಕೆನ್ನೆ ರಂಗೇರಿದೆ..
ಚಿಟಪಟದ ಹನಿದನಿಗೆ ಜಗದ ಸದ್ದುಗಳಡಗಿ ಮೈ ಮರೆಸೋ ವಾಚಳಿಯೂ
ಹೋದ ನಂತರದಲ್ಲೂ ತೊಟ್ಟಿಕ್ಕಿ ತಟಪಟನೆ ಮಾರ್ದನಿಸೋ ಮಾಯವಿಯೂ..
ಬೇಕೆಂದು ಬಾಯಾರಿ ಬೇಗೆಯಲಿ ಬೇಯದೇ ಬರಲಾರಳಾಕೆ ಬಳಿಗೆ..
ಹಸಿರನ್ನೇ ತುಂಬುವಳು ಹೋಗಿ ಬರುವೆಡೆಯೆಲ್ಲಾ, ಸಂಚಲನ ಖುಷಿಯ ಒಸಗೆ..
ವಿದ್ಯಾಶ್ರೀ ಅಡೂರ್