ಕಾವ್ಯಸಂಗಾತಿ
ಸುನಿತಾ ಪಿ ಮೂಲಗೆ ಅವರ ಕವಿತೆ
ಹಂದರದ ಎದೆ ಗಾನ
ಕೊಂಚ ಪ್ರೇಮ ಉಳಿದಿದ್ದರೆ
ಸಾಕು ಮತ್ತೆ ಭೂತದ ಖುಷಿ ತೊಟ್ಟಿಲಲ್ಲಿ
ನಾನು ಮರಳಿ ಬರುವೆ
ಎದೆಯ ಬಗೆದು ತೋರಿಸುವ
ಮಾತಲ್ಲಿ
ಮಮತೆ ತೋರಿ
ಕರುಳ ಪ್ರೀತಿ ತೋರಿ
ಜೊತೆಯಾದರೆ ಸಾಕು
ಈ ಭಾರದ ಜನ್ಮಕ್ಕೆ
ಕೆಲವು ಆ ದಿನಗಳ ಕಾಲ ಜೊತೆ
ಇಲ್ಲವಾದರೇನು
ಅನುದಿನದ ನೆನಪುಗಳ
ಹಂದರ ಎದೆಯಲ್ಲಿದೆ
ಸುಖ-ದುಃಖದ ಪ್ರತಿ
ಹೆಜ್ಜೆಗೂ ನಿನ್ನೊಡನೆ ನಾ ಇರುವೆ ನೆರಳಾಗಿ
ಮನದ ಭಾವನೆಗಳು
ತೀರದ ಬಯಲಿಗೆ ಮಾತ್ರ
ಅದು ನಿನಗೆ ಅರ್ಥವಾಗಲೇ ಇಲ್ಲ
ದುರುಳರ ಭ್ರಮೆಯಲಿ ನಾನು ಕಂಗೊಳಿಸಿ ಮೌನವಾಗಿರಿವೆ
ನಿಜ ಮಾಡದಿರು ಅದನ್ನೂ
ಸತ್ಯ-ಅಸತ್ಯದ ವ್ಯತ್ಯಾಸ ಕಾಣದೆ
ನೆನ್ನೆಯ ದಾರಿಯಲಿ ನಡೆದಿರುವೆ
ದಯಮಾಡಿ ಸಹಕರಿಸು ಒಮ್ಮೆ.
-ಸುನಿತಾ ಪಿ ಮೂಲಗೆ