ಹುಳಿಯಾರ್ ಷಬ್ಬೀರ್ ಅವರ-ಗಜಲ್

ಕಾವ್ಯ ಸಂಗಾತಿ

ಹುಳಿಯಾರ್ ಷಬ್ಬೀರ್ ಅವರ-

ಗಜಲ್

ಖಾಲಿತನಕ್ಕೆ ನಿನ್ನ ಆವರಿಸುವಿಕೆ ಸಾಕಿ
ಮುದ ನೀಡುವ ಸ್ಪರ್ಶದ ಜೀವಂತಿಕೆ ಸಾಕಿ

ಒಂಚೂರು ಫಿಲಾಸಫಿ ಮತ್ತೊಂಚೂರು ಪ್ರೇಮಲಾಪ
ಅಲ್ಲಿಂದಾಚೆಗೆ ನವಿರತೆಯ ಒಲವಿನ ವಂತಿಕೆ ಸಾಕಿ

ಮಾತುಕತೆಯಲ್ಲಿ ಸಂಯಮದಾಟದ ಚದುರದ ಚಿತ್ರಗಳು
ಭರವಸೆಗೇನು ಕೊರತೆಯಿಲ್ಲ ಕಾಲವೇ ಕಾಲಕೆ ಸಾಕಿ

ಉತ್ತರಿಸಲಿ ಬಿಡಲಿ ಎನ್ನುವ ಸೌಮ್ಯ ಕೋಮಲ ಧಿಮಾಕು
ಅಮಲಿಲ್ಲ ಉನ್ಮಾದದ ಸುಳಿವಿಲ್ಲ ಭಾವ ಕನಿಕರಕೆ ಸಾಕಿ

ಷಬ್ಬೂವಿನ ಜಗತ್ತಿಗೆ ಜೋಡಿಯಾದರೆ ಭರಪೂರ ಒಲವು
ನಿನ್ನನೇ ನೀನು ನಂಬದಷ್ಟು ಭೊರ್ಗರೆದು ಕರಗುವಿಕೆ ಸಾಕಿ

ಹುಳಿಯಾರ್ ಷಬ್ಬೀರ್

Leave a Reply

Back To Top