ಡಾ ಶಶಿಕಾಂತ ಪಟ್ಟಣ ರಾಮದುರ್ಗ ಪ್ರೇಮ ಪೈರು

ಕಾವ್ಯ ಸಂಗಾತಿ

ಡಾ ಶಶಿಕಾಂತ ಪಟ್ಟಣ ರಾಮದುರ್ಗ

ಪ್ರೇಮ ಪೈರು

ಬಾನ ತುಂಬಾ
ಹೊಳೆವ ಚುಕ್ಕಿ
ಏಷ್ಟು ಅಂದದ
ಚೆಲುವು ಒಲವಿನ
ಗೆಳತಿ ನೀನು
ಸ್ನೇಹ ಪ್ರೀತಿಯ
ಪ್ರೇಮ ಪುತ್ಥಳಿ
ನಾನು ನೀನು
ಹಾಲು ಜೇನು

ದೇವ ದಯೆಯು
ಜ್ಞಾನ ಬಲವೋ
ಕೂಡಿ ಕೊಂಡೆವು
ಬದುಕಲಿ
ಓದಿ ಬರೆದು
ಆಡಿ ಹಾಡಿ
ಕುಣಿವ ಮನಕೆ
ಹಿರಿಯ ಮರದ
ತಂಪು ನೆರಳು

ನಿನ್ನ ನೆನಪು
ಬರಡು ಚಿಗುರು
ಗುಡುಗು ಸಿಡಿಲು
ಮಿಂಚು ಮರೆಯು
ಮೋಡ ಬಿಚ್ಚಿದ
ಸ್ವಾತಿ ಮಳೆಯು
ಭಾವ ಬಿತ್ತನೆ ಹಸಿರು
ಪ್ರೇಮ ಪೈರು

ಸಿಹಿ ತೆನೆಯು


ಡಾ ಶಶಿಕಾಂತ ಪಟ್ಟಣ ರಾಮದುರ್ಗ

11 thoughts on “ಡಾ ಶಶಿಕಾಂತ ಪಟ್ಟಣ ರಾಮದುರ್ಗ ಪ್ರೇಮ ಪೈರು

  1. ವಾವ್ ಅತ್ಯಂತ ಸುಂದರ ಭಾವ ಜೀವ ತಮ್ಮ ಕವನ ಸರ್

    ಗೀತಾ

  2. ಅತ್ಯಂತ ಸುಂದರವಾಗಿ ಮೂಡಿ ಬಂದಿದೆ ಸರ್ ನಿಮ್ಮ ಕವನ

  3. ಅರ್ಥಪೂರ್ಣ ಕವನ ಸಿಂಚನ

    ಸಂತೋಷ ಕುಮಾರ್ ಶಿವಮೊಗ್ಗ

  4. ಮೋಡ ಬಿಚ್ಚಿದ
    ಸ್ವಾತಿ ಮಳೆಯು
    ದೇವರ ದಯೆಯು
    ಕೂಡಿಕೊಂಡೆವು
    ಬದುಕಲಿ
    ಅದ್ಭುತ ಮನದ ಭಾವನೆಗಳ ಮಹಾಪೂರ

    1. ತುಂಬಾ ಸುಂದರವಾಗಿ ಬಂದಿದೆ ಸರ್ ಪ್ರೇಮ ಪೈರು
      ಡಾ ಶರಣಮ್ಮ ಗೊರೆಬಾಳ

  5. ಡಾ ಮೀನಾಕ್ಷಿ ಪಾಟೀಲ

    ಪ್ರೇಮ ಪೈರು ಸೊಗಸಾದ ಭಾವಪೂರ್ಣ ಕವನ ಧನ್ಯವಾದಗಳು ಸರ್

  6. ತುಂಬಾ ಒಳ್ಳೆಯ ಸಾಹಿತ್ಯ

    ಜಯ ಹುನಗುಂದ ಮೆಲ್ಬೋರ್ನ್ ಆಸ್ಟ್ರೇಲಿಯಾ

  7. ತುಂಬಾ ಸುಂದರ ಮನದಾಳದ ಕವಿತೆ ಹೃದಯಸ್ಪರ್ಶ ವಾಗಿದೆ ಸರ್

Leave a Reply

Back To Top