ಡಾ ಡೋ.ನಾ.ವೆಂಕಟೇಶ-ಕಥೆಯ ವ್ಯಥೆ

ಕಾವ್ಯ ಸಂಗಾತಿ

ಡಾ ಡೋ.ನಾ.ವೆಂಕಟೇಶ

ಕಥೆಯ ವ್ಯಥೆ

ಕವನದ ಕಥೆ ಹೊಸತೇನಲ್ಲ

ಬಾಳಿದಂತೆಲ್ಲಾ
ಮೊಗ್ಗರಳಿ ಹೂವು ಘಮಿಸಿ
ಸಂಭ್ರಮಿಸಿ ಹೊಸ ಸಂಕ್ರಾಂತಿ
ಸೃಷ್ಟಿ!

ಕಥೆಗೊಂದು ಕಸುವು ಬಂದು
ಕನಸುಗಳ ಕಲರವದಲ್ಲಿ
ನನಸುಗಳ ಕಲಬೆರಕೆ

ಕವನವೋ ಕಾವ್ಯವೋ
ನವ್ಯಾತಿನವ್ಯವೋ
ಆಧುನಿಕವೆಂಬ
ಸಮಾನಾಂತರವೋ

ಇಲ್ಲ-
ಬರೆ ಬರೆ ಅತಂತ್ರವೋ!
ಆಕ್ರಂದನವೋ!
ಸಾಹಿತ್ಯವಲ್ಲದ ಒಣ
ಪ್ರತಿಷ್ಠೆಯೋ!

“ಬಡ ಹೊಟ್ಟೆಗೆ ಹಿಟ್ಟಷ್ಟೇ ಸಾಕು!
ಜುಟ್ಟೂ ಬೇಡ, ಮಲ್ಲಿಗೆಯೂ ಬೇಡ”

ಕಥೆ
ಬರೆ ಕಥೆಯಾಗೇ ಇರಲಿ
ಕಾವ್ಯಗಳ ನವಿರಲ್ಲಿ
ಕವಿತೆಗಳ ಇಂಪಲ್ಲಿ
ಬರೆ ಕನಸುಗಳ ಬಯಲಲ್ಲಿ
ನಗ್ನ ಸತ್ಯವಾಗದಿರಲಿ !


ಡಾ ಡೋ.ನಾ.ವೆಂಕಟೇಶ

12 thoughts on “ಡಾ ಡೋ.ನಾ.ವೆಂಕಟೇಶ-ಕಥೆಯ ವ್ಯಥೆ

  1. ಸುಂದರವಾದ ಕವನ ಮತ್ತು ತುಂಬಾ ಅರ್ಥಪೂರ್ಣ. ಚೆನ್ನಾಗಿದೆ ವೆಂಕಣ್ಣ.

    1. ಧನ್ಯವಾದ ಮಂಜಣ್ಣ. ನಿಮ್ಮ ಅವಿರತ ಪ್ರೋತ್ಸಾಹ ಶ್ರೀರಕ್ಷೆ

  2. ಅಣ್ಣಾ. ಮತ್ತೊಂದು ಸುಂದರ ಕವಿತೆ. ಕಥೆ ಕಥೆಯಾಗಿಯೆ ಇರಲಿ, ನಗ್ನ ಸತ್ಯ ವಾಗದಿರಲಿ. ಅರ್ಥ ಪೂರ್ಣ ….. ಸೂರ್ಯ ಕುಮಾರ್

Leave a Reply

Back To Top