ನಾಗರಾಜ ಬಿ.ನಾಯ್ಕಕವಿತೆ-ಅಂದುಕೊಂಡಾಗಲೆಲ್ಲಾ……..

ಕಾವ್ಯಸಂಗಾತಿ

ನಾಗರಾಜ ಬಿ.ನಾಯ್ಕಕವಿತೆ-

ಅಂದುಕೊಂಡಾಗಲೆಲ್ಲಾ……..

ಬರೆಯಬೇಕು ಅಂದುಕೊಂಡಾಗಲೆಲ್ಲಾ
ಎದ್ದು ಓಡುವ ನೆನಪುಗಳು
ಬಾಲ್ಯದ ಗದ್ದೆ ಬಯಲು
ಭತ್ತ ಸಸಿಯ ಹಸಿರು
ಅದರೊಳಗಿನ ಪ್ರಪಂಚ
ನಮ್ಮೊಳಗಿನ ಜಗತ್ತು ಅಂದು
ತೆಂಗಿನಗರಿಯ ಮನೆಗಳು
ಮಾಡಿಗೂ ಹುಲ್ಲು ಹಾಸು
ನೆಲಕ್ಕೋ ಮಣ್ಣ ತೇದ ನೆಲ
ಹಬ್ಬಗಳ ಸಂಭ್ರಮ
ಸವಿಊಟದ ಘಮಘಮ
ಚಪ್ಪರವೆಂದರೆ ಸಾಕಿತ್ತು
ಕುಳಿತು ಮಾತಾಡುವ ಸಮಯವಿತ್ತು
ಕತೆ ಹರಟೆ ಪ್ರೀತಿಯ
ತೋರಣವಿತ್ತು ಬದುಕಲ್ಲಿ
ಇಂದು ಎಲ್ಲವುಗಳ ಮರೆಯಲ್ಲಿ
ನಿಂತಿದೆ ಬದುಕು
ಉಸಿರು ಹಾಗೆ ಭಾವವೂ ಹಾಗೆ
ಇದೆ ಎನ್ನುವುದು ಅಷ್ಟೇ
ಇಲ್ಲ ಎನ್ನುವುದು ಅದರ ಸುತ್ತ
ಎಲ್ಲವೂ ಇರಬೇಕಿತ್ತು
ಆದರೆ ಎಲ್ಲವೂ ಬೇಡ
ಪರಿಪಕ್ವ ಅಲ್ಲ ಎಲ್ಲವೂ
ಸಹಜ ಪರಿಪಕ್ವವಾದರೆ
ಒಂದು ಜಯ
ವಿಜಯದ ನಾಳೆಗೆ
ಬದುಕುವ ಒಲುಮೆಗೆ


ನಾಗರಾಜ ಬಿ.ನಾಯ್ಕ

n

3 thoughts on “ನಾಗರಾಜ ಬಿ.ನಾಯ್ಕಕವಿತೆ-ಅಂದುಕೊಂಡಾಗಲೆಲ್ಲಾ……..

  1. ಚೆನ್ನಾಗಿದೆ ಗೆಳೆಯ ಬದುಕಿನ ಹಿನ್ನೋಟ…. ಬಾಲ್ಯಕ್ಕೆ ಕರೆದೊಯ್ಯುತ್ತದೆ.. ಬದುಕನ್ನ ಮಧುರವಾಗಿಸುತ್ತದೆ

  2. ಇಂತಹ ಕವಿತೆಗಳನ್ನು ಬರೆಯಿರಿ..
    ಚೆನ್ನಾಗಿದೆ.

    @ ಫಾಲ್ಗುಣ ಗೌಡ ಅಚವೆ

Leave a Reply

Back To Top