ಕಾವ್ಯ ಸಂಗಾತಿ
ನಾಗರಾಜ ಜಿ. ಎನ್. ಬಾಡ
ಎರಡು ಪುಟ್ಟಕವಿತೆಗಳು
ಒಂದು
ಎಣ್ಣೆ ಮುಗಿಯುವ ಮೊದಲೇ…
ಮನಸು ಸಾರಿ ಹೇಳಿದೆ
ಗಾಳಿ ಹಾಗೆ ಬೀಸಿದೆ
ದೀಪ ಆರಿ ಹೋಗಿದೆ
ಎಣ್ಣೆ ಹಾಗೆ ಉಳಿದಿದೆ
ಮನದಿ ನೋವು ತುಂಬಿದೆ
ಕಣ್ಣು ನೀರ ಸುರಿದಿದೆ
ವಿಷಾದ ಮನದಿ ಕವಿದಿದೆ
ನಗುವು ಮರೆತು ಹೋಗಿದೆ
ಹೃದಯ ಮೌನದಿ ಕುಳಿತಿದೆ
ಕನಸು ಚಿಗುರದೇ ಕಮರಿದೆ
ಉಸಿರು ಉಳಿಯದೇ ಸಾಗಿದೆ
ಪ್ರಾಣ ಹಾರಿ ಹೋಗಿದೆ
ನಮ್ಮದೇನು ಉಳಿವಿದೆ
ಸುತ್ತ ಕತ್ತಲು ಕವಿದಿದೆ
****
ಎರಡು
ಮನಸ್ಸಿನೊಳಗಿನ ಕಾವು
ಎದೆಯೊಳಗಿನ ನೋವು
ಮಿಡಿವ ಸಿಹಿ ಒಲವು
ನವಿರಾದ ಭಾವ..
ಉಸಿರಿನೊಳಗಿನ ಚೈತನ್ಯ
ಖಾಲಿ ಹಾಳೆಯಲಿ ಗೀಚಿದಾಗ..
ಹೊಸದೊಂದು ರೂಪ
ಹೊಸದೊಂದು ದೀಪ ಬೆಳಗಿದಂತೆ..
ಕಾವ್ಯ ಸಂಗಾತಿ
ನಾಗರಾಜ ಜಿ. ಎನ್. ಬಾಡ
ಹೊಸತನದ ಪುಟ್ಟ ಪುಟ್ಟ ಸಾಲುಗಳು. ಜೊತೆಗೆ ಭಾವವೂ ಹಾಗೆ….. ಒಂದು ಹಲವಾಗುವ ಪರಿ ವಿಶೇಷ…… ಜೊತೆಗೆ ನಾವು ಪ್ರೀತಿಸುವ ನಮ್ಮ ಬದುಕಿದೆ ಸಾಲುಗಳಲ್ಲಿ………
Wow
ನನ್ನ ಸರಿ ತಪ್ಪುಗಳನ್ನು ತಿದ್ದಿಕೊಳ್ಳಲು ನಿಮ್ಮ ಪ್ರೀತಿ ಪ್ರೋತ್ಸಾಹ ನಿರಂತರವಾಗಿರಲಿ..