ಕಾವ್ಯಸಂಗಾತಿ
ಡಾ. ಶರಣಮ್ಮ ಗೊರೆಬಾಳ
ಬೇಡಾ ಸಹಾನುಭೂತಿ
ಗೊತ್ತಿಲ್ಲ ಗೆಳೆಯ ನಿನಗೆ
ನಿನಗೆ ಕಾಯುವಿಕೆಯ
ನೋವು ನರಕ
ನೀನೊಮ್ಮೆ ಕಾಯ್ದು ನೋಡು
ನಾನು ಕಾಯುವ ಬಗೆ
ಗೊತ್ತಿಲ್ಲ ಗೆಳೆಯ
ನಿನಗೆ ಅಗಲಿಕೆಯ ನೋವು
ಮನಸಿನ ಭಾರ ಘೋರ
ನೀನೊಮ್ಮೆ ಪ್ರೀತಿಸಿ ನೋಡು
ನನ್ನ ಹಾಗೆ ಹಗಲು ಇರುಳು
ಗೊತ್ತಿಲ್ಲ ಗೆಳೆಯ
ಹೆಣ್ಣಿನ ಮನದ ತಳಮಳ
ಕಣ್ಣೀರ ಕತೆಯು ನೂರು
ನೀನೊಮ್ಮೆ ಹೆಣ್ಣಾಗಿ ನೋಡು
ಹೊಸಿಲು ದಾಟದ ಮನವು
ಗೊತ್ತಿಲ್ಲ ಗೆಳೆಯ
ನಿನಗೆ ಪ್ರಸವ ವೇದನೆ
ಪಟ್ಟ ಪಾಡು ತಿಂದ ನೋವು
ನೀನೊಮ್ಮೆ ಅರಿತು ನೋಡು
ಭಾವ ಭ್ರೂಣದ ಹಾಡು
ಗೊತ್ತಿಲ್ಲ ಗೆಳೆಯ ನಿನಗೆ
ನಾರಿಯ ತ್ಯಾಗ ಮಮತೆ ಕರುಣೆ
ಒಲವು ಸ್ನೇಹ ಪ್ರೀತಿವಾತ್ಸಲ್ಯ
ಅವಳ ಮನಸೊಮ್ಮೆ
ನೀನು ಗೆದ್ದು ನೋಡು
ಗೊತ್ತಿಲ್ಲ ಗೆಳೆಯ ನಿನಗೆ
ಶತ ಶತಮಾನಗಳ ಸಮಸ್ಯೆ
ಬೇಡಾ ಸಹಾನುಭೂತಿಯ ಮಾತು
ಸನಿಹವಿದ್ದೊಮ್ಮೆ ಸಹಕರಿಸಿ ನೋಡು
ಕ್ಷಣ ದಿನ ಮಾಸಗಳ ನೆನಹು
ಡಾ. ಶರಣಮ್ಮ ಗೊರೆಬಾಳ
Waw! Beautiful madam. ಬಹಳ ಸತ್ಯ.
Angelina Gregory
Very nice
Excellent poetry by you madam
ತುಂಬಾ ಅದ್ಭುತವಾಗಿದೆ ನಿಮ್ಮ ಕವಿತೆ ಮೇಡಂ …