ಇಂದಿರಾ.ಕೆ ಕವಿತೆ-” ಈ ಮೌನ”

ಕಾವ್ಯ ಸಂಗಾತಿ

ಇಂದಿರಾ.ಕೆ

” ಈ ಮೌನ”

ವೈಚಾರಿಕತೆಯ ವಿಶೇಷ ಈ ಮೌನ
ವೈಮನಸ್ಸುಗಳ ವಿಷಾದ ಈ ಮೌನ
ಪ್ರತಿ ನೋವಿನ ಅಂತಿಮ ಈ ಮೌನ
ಪ್ರತಿ ಹಂತದ ವಿರಾಮ ಈ ಮೌನ
ಮೌನ ಪಯಣ…. ಮೌನ ಕವನ….

ಅಂತರಾಳದ ಹರುಷ ಈ ಮೌನ
ಬಾಹ್ಯ ನೋಟದ ಭಾರ ಈ ಮೌನ
ಮಾಡ ಬಯಸದು ಯಾರೊಡನೆ ಕದನ ಈ ಮೌನ
ನೊಂದ ಹೃದಯಗಳ ಸಂಧಾನ ಈ ಮೌನ
ಮೌನ ಸಂವಹನ… ಮೌನ ಸಾಧನ…

ಪ್ರತಿ ಪ್ರಶ್ನೆಯ ಸಮಾಧಾನ ಈ ಮೌನ
ಜೊತೆ ಸಾಗುವ ಯಾನ ಈ ಮೌನ
ಮುರಿದ ಮನಗಳ ಏಕಾಂತ ಈ ಮೌನ
ಹಲವು ತುಮುಲಗಳ ಆತಂಕ ಈ ಮೌನ
ಮೌನ ಅನಂತ…
ಮೌನ ದಿಗಂತ…

ಕೋಪವನ್ನು ಹಿಡಿದಿಟ್ಟ ತಾಳ್ಮೆ ಈ ಮೌನ
ನೆಮ್ಮದಿಯ ಕೂಡಿಟ್ಟ ಜಾಣ್ಮೆ
ಈ ಮೌನ
ಮೌನಕ್ಕೆ ಸರಿಸಾಟಿ ಬೇರೊಂದಿಲ್ಲ ಈ ಮೌನ
ಹೆಣ್ಣು ಮನಗಳ ಗೆದ್ದ ನಿರಾಭರಣ ಈ ಮೌನ
ಮೌನ ಬಂಗಾರ….
ಮೌನ ಮಂದಾರ….


ಇಂದಿರಾ.ಕೆ

One thought on “ಇಂದಿರಾ.ಕೆ ಕವಿತೆ-” ಈ ಮೌನ”

Leave a Reply

Back To Top