ಕಟ್ಟೆ ಎಂ ಎಸ್ ಕೃಷ್ಣಸ್ವಾಮಿ- ಆಟವಾಡಿದೆ

ಕಾವ್ಯ ಸಂಗಾತಿ

ಕಟ್ಟೆ ಎಂ ಎಸ್ ಕೃಷ್ಣಸ್ವಾಮಿ-

ಆಟವಾಡಿದೆ

Line art Motion Blur Zoom background

ಜೊತೆಯಲ್ಲೇ ಇದ್ದರು ಬಹಳ ಗೆಳೆತನ
ಹೃದಯಕ್ಕೆ ಇಟ್ಟಿದೆ ಚೂಪದ ವಸ್ತು ..
ಜೊತೆಯಲ್ಲೇ ಇದ್ದರು ಬಿಳುಪು ದಂತಗಳು
ಒಳಒಳಗೇ ಮಸಿಯುತ್ತ ಸುತ್ತಿದೆ ಗಸ್ತು ..//೧//

ಕಂಡೊಡನೆ ಮಿಣುಗುವ ಅಂದದ ನಯನದಲ್ಲಿ
ಇಂದು ವಂಚನೆಯ ಸುಳಿಗಾಳಿ ಆಡುತ್ತಿದೆ..
ಮುದ್ದಾಗಿಯೇ ನಗುತ್ತಿದ್ದ ನಗುವಿನಲ್ಲಿ ಏಕೋ
ಹುಸಿನಗು ಪಾತಾಳಕ್ಕೆ ನೂಕಲು ಬೇಡುತ್ತಿದೆ..//೨//

ಸದಾ ಜೊತೆಯಲ್ಲೇ ಇರುತ್ತಿದ್ದ ಕರಗಳೇಕೋ
ಬೆನ್ನಿನ ಕಡೆಗೆ ತಿರುಗಿ ನೋಡುತ್ತಿದೆ..
ನಡೆಯುವ ಹೆಜ್ಜೆಯ ಗುರುತು ಮಾಸಿ
ನಡೆಗೆ ಅಡ್ಡಗಾಲು ಹಾಕಲು ಕಾಯುತ್ತಿದೆ..//೩//

ಶತ್ರುಗಳ ಮಿತ್ರರಾಗಿ ಸಂಧಿ ಮಾಡುತ
ಸ್ನೇಹದ ಬಳ್ಳಿಯ ಕತ್ತರಿಸಲು ಸಜ್ಜಾಗಿದೆ..
ಸಂಚಲಿ ನಂಬಿಸಿ ದ್ರೋಹವ ಬಗೆಯುತ
ಶಕ್ತಿಯ ಕುಗ್ಗಿಸಲು ಮರೆಯಲಿ ಆಟವಾಡಿದೆ ..//೪//✒️


ಕಟ್ಟೆ ಎಂ ಎಸ್ ಕೃಷ್ಣಸ್ವಾಮಿ

2 thoughts on “ಕಟ್ಟೆ ಎಂ ಎಸ್ ಕೃಷ್ಣಸ್ವಾಮಿ- ಆಟವಾಡಿದೆ

  1. ಸರ್, ಆಟವಾಡಿದೆ ಕವನದ ಸಾಲುಗಳು ಹೆಸರಿಗೆ ತಕ್ಕಂತೆ ಮೂಡಿ ಬಂದಿದೆ. ತಮಗೆ ಶುಭವಾಗಲಿ

Leave a Reply

Back To Top