ಹುಳಿಯಾರ್ ಷಬ್ಬೀರ್-ಹನಿ ಗವಿತೆಗಳು…

ಕಾವ್ಯಸಂಗಾತಿ

ಹುಳಿಯಾರ್ ಷಬ್ಬೀರ್-

ಹನಿ ಗವಿತೆಗಳು…

1

ನಿನ್ನ…
ಮಕ ಮಲ್ಲಿನಂತಹ
ಮಾತು
ನನ್ನೊಳಗೆ
ಮೆಹಫಿಲ್
ಸೃಷ್ಟಿಸಿದೆ
ಶೃತಿ, ರಾಗ, ಆಲಾಪ
ಎಲ್ಲೆಲ್ಲೂ
ಗಂಧರ್ವ ಲೋಕ
ಧರೆಗಿಳಿಸಿದೆ…!

2

ಸದಾ ನಿನ್ನದೇ
ಖಯಾಲಿ…
ಗುಮಾನಿ ಮಾಡಬೇಡ
ಬದಲಿ ಮನಸ್ಸು
ಮಾಡುವಷ್ಟು ಜಾಗವೇ
ನೀನು ಬಿಟ್ಟಿಲ್ಲ
ಬಿಡುವುದು ಇಲ್ಲ
ಆವರಿಸಿರುವ
ಅಗಾಧ ಒಲವು
ನೀ…!

3

ಹೃದಯದಂಗಳದಲ್ಲಿ
ನೀ… ಅಂದು ಇಟ್ಟ
ಒಲವಿನ ಚುಕ್ಕಿ
ಎಂದೆಂದಿಗೂ
ಅಳಿಸಲಾಗದ
ಭಾವದ ರಂಗೋಲಿಯಾಗಿ
ರಾರಾಜಿಸುತ್ತಿದೆ…!

4

ಭಾವಕ್ಕೆ ಮೌನದ
ಆ‌ಸೆಯ ಹಂಗಿಲ್ಲ
ಒಲವಾಗಿರುವ
ಹೃದಯಕ್ಕೆ
ನೋವಿನ ಅರಿವಿಲ್ಲ
ಸಿಕ್ಕರೂ ಸಿಗದಿದ್ದರೂ
ಪ್ರೇಮಿಗಳು ಅಮರ
ಪ್ರೀತಿಯಂತೂ
ಅಜರಾಮರ
ನೆನಪುಗಳು
ಸಾವಿರದ ಜೀವಂತ
ಪುಸ್ತಕ…!


ಹುಳಿಯಾರ್ ಷಬ್ಬೀರ್

2 thoughts on “ಹುಳಿಯಾರ್ ಷಬ್ಬೀರ್-ಹನಿ ಗವಿತೆಗಳು…

Leave a Reply

Back To Top