ಕಾವ್ಯ ಸಂಗಾತಿ
ಮುತ್ತು ಬಳ್ಳಾ ಕಮತಪುರ
ಗಜಲ್
ಇಲ್ಲದವರ ಮಧ್ಯ ಬದುಕಬಹುದು ಮನಸಿಲ್ಲದವರ ಜೊತೆ ಹೇಗೆ ಬದುಕಲಿ
ಮುಸಿಕೊಂಡವರನು ಸರಿಪಡಿಸಬಹುದು ನಾಟಕವಾಡಿದವರ ಜೊತೆ ಹೇಗೆ ನಟಿಸಲಿ
ನಗುವವರ ನಡುವೆ ಜೀವನ ಸಾಗಿಸಬಹುದು ಅತ್ತಂತೆ ನಟಿಸುವವರ ಪ್ರಪಂಚದಲಿ
ಬಿಟ್ಟು ಹೋದವರೂ ಬರಬಹುದು ಜೊತೆಗಿದ್ದು ಚುಚ್ಚಿದವರ ಜೊತೆ ಹೇಗೆ ಹೋಗಲಿ
ನೆಪ ಮಾತ್ರ ಸಲುಗೆಯ ಬೆಳಸಿ ಕಾರ್ಯ ಸಾಧನೆ ಉಂಡೆಸೆದ ಬಾಳೆಲೆ ಸಂಕಟ ನನಗೆ
ಕೆಲಸಗಳು ಮಾತನಾಡದೆ ಬಂಗಾರ ಕುಟಿಯಿಂದ ಇರಿಯುವರ ಜೊತೆ ಹೇಗೆ ಕೂಡಲಿ
ಪ್ರೀತಿಸುವ ದಾರಿಯಲಿ ನೂರಾರು ಮುಳ್ಳುಗಳೆ ರಕ್ಷಣಾತ್ಮಕ ಆಟವಲ್ಲದೆ ಮತ್ತೇನು
ಅಂದ ಚಂದದ ಪ್ರೇಮ ಪುರಾಣ ಬಣ್ಣಗೇಡಸಿ ಕಳಚಿದವರ ಜೊತೆ ಹೇಗೆ ಬೇರೆಯಲಿ
ಕರಗಿಸುವ ಅರಗಿಣಿಯ ಮುತ್ತಿನ ಅರಮನೆಯ ಪ್ರೀತಿ ಅಗಾಧ ಹೇಗೆ ತೂರೆಯಲೆ
ಒಳ ಹೊರಗು ಆನಂದ ಸಾಗರ ಕೂಡಿಕಟ್ಟಿ ಮರೆತು ಹಾಡಿದವರ ಜೊತೆ ಹೇಗೆ ಹಾಡಲಿ
ಮುತ್ತು ಬಳ್ಳಾ ಕಮತಪುರ
ಧನ್ಯವಾದಗಳು ಸರ್