ಬಡಿಗೇರ ಮೌನೇಶ್-ಗಜಲ್

ಕಾವ್ಯ ಸಂಗಾತಿ

ಬಡಿಗೇರ ಮೌನೇಶ್

ಗಜಲ್

ಅಗೆದಷ್ಟು ಚಿಮ್ಮುವುದು ಒಲವಿನೊರತೆ
ತರುಣಿ ತಿಳಿಸುವುದು ಅದನು ಹೇಗೆ ನಿನಗೆ

ತೆಗೆದಷ್ಟು ದೊರೆಯುವುದು ಪ್ರೇಮದ ನಿಧಿಯು
ಸಖಿಯೆ ಅರ್ಥೈಸುವುದು ಅದನು ಹೇಗೆ ನಿನಗೆ

ಅರೆದಷ್ಟು ಹರಡುವುದು ಪ್ರೀತಿಯ ಚಂದನ
ಗೆಳತಿ ಪರಿಮಳಿಸುವುದು ತಿಳಿಯದೆ ನಿನಗೆ

ಸವಿದಷ್ಟು ಹೆಚ್ಚುವುದು ಚೆಲುವಿನ ಒಲವು
ಕುವರಿ ಚೆಲುವಿಕೆಯು ಅಲ್ಲಿ ತೋರದೆ ನಿನಗೆ

ಕರಗದ ಕಲ್ಲೆದೆಗೆ ಸೋತು ಜಾರಿದೆ ಮೌನಕೆ
ಕರಗಿ ಭಾವ ಜೀವ ಮಿಡಿಯಬಾರದೆ ನಿನಗೆ

ಒಲವಿನೂರ ಚಂದ್ರಿಕೆ ಮನಸೆಳೆವ ಮದನಿಕೆ
ಮೌನಿ ಬೇಡುವ ಹೃದಯ ನೀಡು ನಿಹಾರಿಕೆ.


ಬಡಿಗೇರ ಮೌನೇಶ್

2 thoughts on “ಬಡಿಗೇರ ಮೌನೇಶ್-ಗಜಲ್

  1. ಸರ್ ನಮಸ್ಕಾರ..
    ಇದರಲ್ಲಿ ಕಾಫಿಯ, ರದೀಫ್ ಯಾವುದು ತಿಳಿಸುವಿರಾ

  2. ಚಂದ್ರಿಕೆ..ಮದನಿಕೆ.. ನಿಹಾರಿಕೆ….ಸೂಪರ್ ಅಣ್ಣ..

Leave a Reply

Back To Top