ಹಮೀದಾ ಬೇಗಂ ದೇಸಾಯಿ-ಗಜಲ್

ಕಾವ್ಯಸಂಗಾತಿ

ಹಮೀದಾ ಬೇಗಂ ದೇಸಾಯಿ

ಗಜಲ್

ಮುಷ್ಟಿಯಲಿ ಹಿಡಿಸುವ ತೆಳು ಕಾಯವಿಹುದು ನೋಡು
ಒಂದಿಷ್ಟು ಮೂಳೆ ಮಾಂಸ ರಕ್ತ ತುಂಬಿಹುದು ನೋಡು

ಮೊಗದಲಿ ಅದೆಂಥ ಕಂದನ ಸ್ನಿಗ್ಧ ನಗು ಅಲ್ಲವೇ
ಅಗಾಧ ಚೇತನದ ಚಿಲುಮೆ ಚಿಮ್ಮುತಿಹುದು ನೋಡು

ಸತ್ಯ ಅಹಿಂಸೆಯ ಮಂತ್ರಕೆ ಜಗವೇ ಮಂತ್ರಮುಗ್ಧವಾಯ್ತು
ಅವ ಬಿತ್ತಿದ ಶಾಂತಿಯು ಹಿಂಸೆಯ ಸದ್ದಡಗಿಸಿಹುದು ನೋಡು

ಪಾರತಂತ್ರ್ಯದ ಸಂಕೋಲೆಯಲಿ ನರಳಿದವರೆಷ್ಟೋ ಸಿಲುಕಿ
ಬ್ರಿಟಿಷರ ಕಿಚ್ಚೂ ಇವನ ಮೋಡಿಗೆ ನೆಲಕಚ್ಚಿಹುದು ನೋಡು

ಮನುಕುಲದ ಒಳಿತನೇ ಬಯಸುತ ಹುತಾತ್ಮನಾದನಿವ ಮಹಾತ್ಮಾ
ರಾಷ್ಟ್ರಪಿತ ಗಾಂಧಿ ತಾತನಿಗೆ ಬೇಗಂ ಳ ನುಡಿ ನಮನ ವಿಹುದು ನೋಡು


ಹಮೀದಾ ಬೇಗಂ ದೇಸಾಯಿ

3 thoughts on “ಹಮೀದಾ ಬೇಗಂ ದೇಸಾಯಿ-ಗಜಲ್

Leave a Reply

Back To Top