ವರದೇಂದ್ರ ಕೆ ಮಸ್ಕಿ-ಬಾಪೂಜಿ

ಕಾವ್ಯ ಸಂಗಾತಿ

ವರದೇಂದ್ರ ಕೆ ಮಸ್ಕಿ-

ಬಾಪೂಜಿ

ನೀನೆ ಶಕ್ತಿ ನೀನೆ ಯುಕ್ತಿ
ನೀನೆ ಸ್ಪೂರ್ತಿ ನೀನೆ ಕೀರ್ತಿ
ನೀನೆ ಸತ್ಯ ನೀನೆ ನಿತ್ಯ
ನೀನೆ ಅಸ್ತ್ರ ನೀನೆ ಶಸ್ತ್ರ

ನಮ್ಮ ದೇಶದ ಸೈನಿಕ ನೀನು
ನಮ್ಮ ಪಾಲಿನ ನಾವಿಕ ನೀನು
ನೀನಿರಲು ಜಯವೆಲ್ಲ, ನಮ್ಮೊಳಗೆ ಭಯವಿಲ್ಲ
ಮನ ಮನ ಮನದೊಳಗೆ ನೀನಿರುವೆ

ಬಾಪೂಜಿ ಬಾಪೂಜಿ ಭಾರತದ ಗಾಂಧೀಜಿ
ಬಾಪೂಜಿ ಬಾಪೂಜಿ ಭಾರತದ ಪಿತಾಜಿ

ನೀನೆ ಶಕ್ತಿ ನೀನೆ ಯುಕ್ತಿ
ನೀನೆ ಸ್ಪೂರ್ತಿ ನೀನೆ ಕೀರ್ತಿ

ಸತ್ಯವನ್ನೆ ನಂಬಿ ನೀನು ಜಗವ ನಡೆಸಿದವನು
ಅಹಿಂಸೆಯಿಂದ ಕೆಂಪು ನೆಲವ ಹಸಿರುಗೊಳಿಸಿದವನು|
ಶ್ವೇತ ವಸ್ತ್ರ ಧೋತ್ರ ತೊಟ್ಟು ಭೀತಿ ಅಳಿಸಿದವನು
ಕಪ್ಪು ಜನರ ಒಳಿತಿಗಾಗಿ ಧರಣಿ ನಡೆಸಿದವನು|

ಬಿಟ್ಟು ಹಿಂಸೆಯ ದಾರಿ, ಹೊರಟೆ ಶಾಂತಿಯ ತೋರಿ
ನಮ್ಮ ಬಾಳಿಗೆ ನೀನೆ ಅನಂತ ಕರುಣಾ ಮೂರ್ತಿ
ನಮ್ಮ ಭಾರತ ಹೂಗಳು ಪಾರು…
ದುಷ್ಟ ಆಂಗ್ಲರ ಮನಗಳು ಚೂರು,
ಮನೆ ಮನೆ ಮನೆಯೊಳಗೆ ನಿನ ಪೂಜೆ

ಬಾಪೂಜಿ ಬಾಪೂಜಿ ಭಾರತದ ಗಾಂಧೀಜಿ
ಬಾಪೂಜಿ ಬಾಪೂಜಿ ಭಾರತದ ಪಿತಾಜಿ

ದ್ವೇಷ ಕಿತ್ತಿ ಪ್ರೇಮ ಬಿತ್ತಿದ ಜಗದ ರೈತನಿವನು
ಕೋಲು ಹಿಡಿದು ಸೋಲು ಕಳೆದ ಜಗದ ಯೋಗಿ ಇವನು|
ಜನರ ತುಡಿತ ಹೃದಯ ಮಿಡಿತ ಅರಿತ ಭರತ ಇವನು
ಭಾರತಾಂಬೆ ಬಯಸಿದಂತ ಧರ್ಮ ಗುರುವೆ ಇವನು|

ನಿನ್ನ ಶಾಂತಿಯ ಪಾಠ ಅರಿತು ಹೊರಟಿದೆ ಮನವು
ನಿನ್ನ ಮಾತಿನ ಮರ್ಮ ಬೆರೆತು ನಡೆದಿದೆ ಜಗವು

ನಮ್ಮ ಪಾಲಿನ ಭಾರತ ನೀನು
ತಾಯ್ನಾಡಿಗೆ ಭರವಸೆ ನೀನು

ನುಡಿ ನುಡಿ ನುಡಿಯೊಳಗೆ ನಿನ ಸ್ಮರಣೆ

ಬಾಪೂಜಿ ಬಾಪೂಜಿ ಭಾರತದ ಗಾಂಧೀಜಿ
ಬಾಪೂಜಿ ಬಾಪೂಜಿ ಭಾರತದ ಪಿತಾಜಿ

ನೀನೆ ಶಕ್ತಿ ನೀನೆ ಯುಕ್ತಿ
ನೀನೆ ಸ್ಪೂರ್ತಿ ನೀನೇ ಕೀರ್ತಿ


ವರದೇಂದ್ರ ಕೆ ಮಸ್ಕಿ

3 thoughts on “ವರದೇಂದ್ರ ಕೆ ಮಸ್ಕಿ-ಬಾಪೂಜಿ

  1. ಸರ್, ಗಾಂಧೀಜಿಯ ವ್ಯಕ್ತಿತ್ವ ಹಾಗೂ ಹೋರಾಟದ ಕೆಚ್ಚನ್ನು ಸುಂದರವಾಗಿ ನಿಮ್ಮ ಕವಿತೆಯಲ್ಲಿ ಹಿಡಿದಿಟ್ಟಿದ್ದಿರಾ.

  2. ಚೆನ್ನಾಗಿದೆ ಇದರಲ್ಲಿ ಗಾಂಧೀಜಿ ಯವರ ಪೂರ್ಣ
    ಚಿತ್ರಣ ಬಂದಿದೆ

Leave a Reply

Back To Top