ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಅನುವಾದ ಸಂಗಾತಿ

ಗಜಲ್

ಹಿಂದಿ ಮೂಲ : ಜಬೀವುಲ್ಲ ಅಸದ್

ಕನ್ನಡಕ್ಕೆ: ಅನಸೂಯ ಜಹಗೀರದಾರ

ನಿನ್ನ ಪ್ರೀತಿಯನು ಚಾಲನೆಗೊಳಿಸು ಮತ್ತೊಮ್ಮೆ
ಈ ಹೃದಯವನು ಮಿಡಿತಗೊಳಿಸು ಮತ್ತೊಮ್ಮೆ

ಹಳಹಳಿಕೆ ಅಲಂಕರಿಸಿದೆ ಮನದ ಪಿಸುಮಾತ ಗೋಡೆಯೊಳಗೆ
ಸಂಜೆಯ ನೀರವತೆಯ ಬೇಸರವ ಹೋಗಲಾಡಿಸು ಮತ್ತೊಮ್ಮೆ

ಬಹು ನೆನಪಾಗಿ ಸುಳಿದು ಕಾಡುವೆ ಏನೊ
ಎಂತೋ ತಿಳಿಯದಾಗಿದೆ ಏಕಾಂತದೊಳಗೆ ಅವಿತ ಕಂಬನಿದುಂಬಲು ಅನುಮತಿಸು ಮತ್ತೊಮ್ಮೆ

ಎದೆಯಲಿ ಮೀಟಿದ ಸಿತಾರದ ತಂತಿಯು ಚೂರಾಯಿತು ಪ್ರೇಮವೆ
ಮೌನದೊಳಗೆ ತುಡಿವ ಹಾಡನು ಗುಣುಗುಣಿಸು ಮತ್ತೊಮ್ಮೆ

ನಿನ್ನದೇ ಕನಸುಗಳು ಒಂಟಿಯಾಗಿ ಕುಳಿತಾಗಲೆಲ್ಲ ಹೀಗೆ
ಜೀವನದ ನಂಟನು ಮರಣದೊಂದಿಗೆ ವಿಶ್ಲೇಷಿಸು ಮತ್ತೊಮ್ಮೆ

ಈಗಲೂ ಬದುಕಿರುವೆನೆಂದರೆ ನಿನ್ನಿಂದಾಗಿಯೇ ಅಲ್ಲವೆ
ಇದ್ದೂ ಇಲ್ಲವಾಗುವ ಪರಿಯನು ಅಸದ್ ಗೆ ಕರುಣಿಸು ಮತ್ತೊಮ್ಮೆ


ಹಿಂದಿ ಮೂಲ:- ಜಬೀವುಲ್ಲ ಅಸದ್

ಕನ್ನಡಕ್ಕೆ :- ಅನಸೂಯ ಜಹಗೀರದಾರ

About The Author

6 thoughts on “ಜಬೀವುಲ್ಲ ಅಸದ್ ಅವರ ಹಿಂದಿ ಗಜಲ್ ಅನುವಾದ ಅನಸೂಯ ಜಹಗೀರದಾರವರಿಂದ”

  1. ಬಾಗೇಪಲ್ಲಿ ಕೃಷ್ಣಮೂರ್ತಿ

    ಗಜಲ ವ್ಯಾಕರಣದಲೇ ಅನುವಾದಿಸಿರುವುದು ವಿಶೇಷ. ತಮಗೆ ಅಭಿನಂದನೆ.

Leave a Reply

You cannot copy content of this page

Scroll to Top