ನಿಜಗುಣಿ ಎಸ್ ಕೆಂಗನಾಳ ಕವಿತೆ-ಕಾವ್ಯ ಕಸ್ತೂರಿ

ಕಾವ್ಯ ಸಂಗಾತಿ

ನಿಜಗುಣಿ ಎಸ್ ಕೆಂಗನಾಳ ಕವಿತೆ

ಕಾವ್ಯ ಕಸ್ತೂರಿ

ನಿನಗಾಗಿ ಬರೆಯುವೆ
ನಾನೊಂದು ಕವಿತೆ
ನಿನಗಾಗಿ ಹಾಡುವೆ
ನಾನೊಂದು ಪ್ರೇಮಗೀತೆ…!

ಈ ಹಗಲು ಇರುಳಾಗಿ
ಆ ಇರುಳೇ ಹಗಲಾಗಿ
ಕನಸುಗಳೇ ಕವಿತೆಯಾಗಿ
ಕವಿತೆಗಳೇ ಭಾವ ಗೀತೆಯಾಗಿ
ಅರಳಿ ನಿಂತಿವೇ ನೊಡು ನಿನಗಾಗಿ…!

ಬೆಳದಿಂಗಳ ಚುಕ್ಕಿಯಾಗಿ
ನನ್ನೋಳಗೆ ನೀ ಮೂಡಿರುವೆ
ಮಂದಾರ ಪುಷ್ಪವಾಗಿ
ನನ್ನೋಳಗೆ ನೀ ಅರಳಿ ನಿಂತಿರುವೆ…!

ನಿನೊಂದು ಕಾವ್ಯ ಕಸ್ತೂರಿಯಾದೆ
ನಾನೊಂದು ಭವ್ಯ ಗೋಪುರವಾದೆ
ನೀ ನನ್ನ ಹೃದಯ ಗೀತೆಯಾಗಿದೆ
ನಾ ನಿನ್ನ ಅಮರ ಪ್ರೇಮಿಯಾ

————————————–

ನಿಜಗುಣಿ ಎಸ್ ಕೆಂಗನಾಳ

Leave a Reply

Back To Top