ಹಂಸಪ್ರಿಯ ಕವಿತೆ-ವಿಚಿತ್ರ

ಕಾವ್ಯ ಸಂಗಾತಿ

ಹಂಸಪ್ರಿಯ ಕವಿತೆ-

ವಿಚಿತ್ರ

ಕುಂಚವಿಲ್ಲದೆ ಬರೆದ ಭಿತ್ತಿಗಂಟದ ಚಿತ್ರ
ಬರೆದವವರಾರೋ ಆಕಾಶ ಭಿತ್ತಿಯಲಿ.

ಮಾರುತನ ತುಂಟಾಟಕೆ,
ಮೇಘಗಳ ನರ್ತನ.
ಚಿತ್ರಗಳ ವೈಚಿತ್ರಕೆ ಬಣ್ಣ ಬಳಿದ ರವಿ ;ರವಿವರ್ಮನಂತೆ.

ಅಶ್ವ – ಗಜರೂಪ
ದೇವ – ದೈತ್ಯ ರೂಪ
ವಿಶ್ವ ವಿರಾಟರೂಪ
ಕ್ಷಣ – ಕ್ಷಣಕೂ ವಿಲಕ್ಷಣ ರೂಪ.

ತಂಪಾದ ಅನಿಲ ಸ್ವರ್ಶಕೆ
ಹನಿ ಹನಿಯಾಗಿ ಸುರಿದು ತಲಸ್ಪರ್ಶಕೆ
ಚಿತ್ರಗಳೆಲ್ಲಾ ಮಾಯ, ಶುಭ್ರ ಆಕಾಶಕಾಯ.

ಸುರಿದ ಹನಿ ಮತ್ತೆ ಮೋಡವಾಗಬೇಕು
ಹೊಸಚಿತ್ರವಾಗಬೇಕು…

ನೆಲ – ಮುಗಿಲ
ನಂಟನರಿಯಬೇಕು ಮನುಜ.
ಕಳೆದುಕೊಂಡರೆ ನಂಟು ಬಾಳು “ವಿಚಿತ್ರ”.

———————–

ಹಂಸಪ್ರಿಯ

Leave a Reply

Back To Top