ಕಾವ್ಯಸಂಗಾತಿ
ಡಾ ಶಶಿಕಾಂತ ಪಟ್ಟಣ ರಾಮದುರ್ಗ
ಸತ್ಯ ಹೇಳುವವ
ಸತ್ಯ ಹೇಳುವವ
ಸಿಟ್ಟಿಗೆಳುತ್ತಾನೆ
ಸಿಟ್ಟಿಗೆದ್ದಾಗ
ತಿವಿಯುತ್ತಾನೆ
ಚುಚ್ಚುತ್ತಾನೆ
ಮತ್ತೆ ಮೌನದ ಉಸಿರು
ಒಂಟಿಯಾಗುತ್ತಾನೆ
ಒಳಗೊಳಗೆ ನೋವು
ದುಃಖ ಕಳವಳ
ಏಕಾಂಗಿಯ ಕಹಿ ದಿನಗಳು
ಅವಮಾನ ಟೀಕೆಗೆ
ಗುರಿಯಾಗುತ್ತಾನೆ
ಮರಗುತ್ತಾನೆ
ಬದಲಾಗದ ಸಮಾಜ
ಕಣ್ಣೀರು ಹಾಕುತ್ತಾನೆ
ಹೀಗೆ ಒಬ್ಬಂಟಿಗ
ಸರಕಾರಿ ಶವ ವಾಹನದಿ
ಪಯಣ
ಮುಖದ ಮೇಲೆ
ನಿರ್ಲಿಪ್ತತೆ ನಗೆಯು
ವಿದಾಯ ಹೇಳುತ್ತಾನೆ
ಸತ್ಯದ ಮೂಟೆಯ ಹೊತ್ತು
ಡಾ ಶಶಿಕಾಂತ ಪಟ್ಟಣ ರಾಮದುರ್ಗ
ವಾವ್ ಅತ್ಯಂತ ಸಮಂಜಸ ಮತ್ತು ವೈಚಾರಿಕ ಕವನ ಸರ್
ಹೃದಯ ಕಲಕುವ ಕವನ ನಿಜ ಸತ್ಯ ಯಾವಾಗಲೂ ಒಂಟಿ
ಇಂತಹ ಅನೇಕ ಒಂಟಿ ಬದುಕು ಈಗ ಮತ್ತೆ ಒಂದಾಗಿ ಬೇಕು
ಹೃದಯ ಸ್ಪರ್ಶ ಕವನ
ಇಂತಹ ಭಾವ ಪ್ರಜ್ಞೆ
ಮತ್ತೆ ಮತ್ತೆ ಪ್ರಕಟ ಗೊಳ್ಳಲೀ
Excellent poem Sir
ಸತ್ಯ ಸಮತೆ ಎಂಬ ಅಸ್ತ್ರ ಪ್ರಯೋಗಿಸಿ ಯಶಸ್ವಿಯಾಗಿದ್ದಾರೆ ನಮ್ಮ ಹಿರಿಯರು
ತಮ್ಮ ಕವನ ವಾಸ್ತವಿಕ
ಸತ್ಯವನ್ನು ಹೇಳುವವನು ಯಾವಾಗಲೂ ಒಂಟಿ….. ಬದಲಾಗದ ಸಮಾಜವನ್ನು ನೋಡಿ ನಿರ್ಲಿಪ್ತ ಭಾವನೆಯಿಂದ ವಿದಾಯ ಹೇಳುವ… ಕಟುಸತ್ಯವನ್ನು ನಿಮ್ಮ ಕವನದ ಸಾಲುಗಳ ಮೂಲಕ ಬಿಂಬಿಸಿದ್ದೀರಿ ಸರ್
ಕ್ರಾಂತಿಕಾರ ಭಾವ ಸರ್
ಸುಂದರ ಭಾವ ಪ್ರಜ್ಞೆ ಕವನ
ಸರ್