ಡಾ ಸಾವಿತ್ರಿ ಮಹಾದೇವಪ್ಪ ಕಮಲಾಪೂರ ಕವಿತೆ-ಹುಡುಕುವೆ

ಕಾವ್ಯ ಸಂಗಾತಿ

ಡಾ ಸಾವಿತ್ರಿ ಮಹಾದೇವಪ್ಪ ಕಮಲಾಪೂರ ಕವಿತೆ-

ಹುಡುಕುವೆ

ಹುಡುಕಲಾರೆ ಗೆಳತಿ ನಿನ್ನನ್ನು
ಜೊತೆ ಬರುವ ನೆರಳು ನೀನೇ ಆದಾಗ
ಹುಡುಕಲಾರೆ ಗೆಳತಿ ನಿನ್ನನ್ನು
ನಾ ಬರೆಯುವ ಕವಿತೆಗೆ ಶಬ್ದ ನೀನೇ ಆದಾಗ
ಹುಡುಕಲಾರೆ ಗೆಳತಿ ನಿನ್ನನ್ನು
ನನ್ನ ಮೌನದ ಮಾತಿಗೆ ನೀನೇ ಧ್ವನಿ ಆದಾಗ
ಹುಡುಕಲಾರೆ ಗೆಳತಿ ನಿನ್ನನ್ನು
ನಾ ನೋಡುವ ಕಂಗಳ ತುಂಬೆಲ್ಲ ನಿನ್ನದೇ ಛಾಯೆ ಮೂಡಿರಲು
ಹುಡುಕಲಾರೆ ಗೆಳತಿ ನಿನ್ನನ್ನು
ನಾ ಸೇವಿಸುವ ಆಹಾರಕ್ಕೆ ನೀನೇ ಎಡೆಯಾಗಿ ನಿಂತಾಗ
ಹುಡುಕಲಾರೆ ಗೆಳತಿ ನಿನ್ನನ್ನು
ನಾ ನಿದ್ರಿಯಿಸುವ ಹಾಸಿಗೆಯಲಿ ನೀನೇ ತಲೆ ದಿಂಬು ಆದಾಗ
ಹುಢುಕಲಾರೆ ನಿನ್ನನ್ನು ಗೆಳತಿ
ನನಗೆ ಬೀಳುವ ಕನಸುಗಳ ತುಂಬೆಲ್ಲ ನಿನ್ನದೇ ಛಾಯೆ ಮೂಡಿರುವಾಗ
ಹುಡುಕಲಾರೆ ಗೆಳತಿ ನಿನ್ನನ್ನು
ನಾ ಪಯಣಿಸುವ ಪಥಕ್ಕೆಲ್ಲ ನೀನೇ
ಮಾರ್ಗಿಯಾಗಿ ಬರುವಾಗ
ಹುಡುಕುವೆ ಗೆಳತಿ ನಾ ಕಂಡದೆಲ್ಲ ಬರೀ ಭ್ರಮೆ ಎಂದು ಅರಿತಾಗ
ಹುಡುಕುವೆ ನಿನ್ನನ್ನು ಗೆಳತಿ…
———————————————————-

ಡಾ ಸಾವಿತ್ರಿ ಮಹಾದೇವಪ್ಪ ಕಮಲಾಪೂರ

Leave a Reply

Back To Top