ಡಾ.ಅಮೀರುದ್ದೀನ್ ಖಾಜಿ-ಗಜಲ್

ಕಾವ್ಯ ಸಂಗಾತಿ

ಡಾ.ಅಮೀರುದ್ದೀನ್ ಖಾಜಿ

ಗಜಲ್

ನೀನಿಲ್ಲದೆ ಬಾಡುತ ಮರಳುತಿವೆ ಪ್ರೀತಿ ಹೂ
ನೀನಿಲ್ಲದೆ ಕಾಡುತ ನರಳುತಿವೆ ಪ್ರೀತಿ ಹೂ

ನಿನ್ನ ಮೊಗದೊಳು ಲಾಸ್ಯವಾಡಿದಂತೆ ನಗು
ನನ್ನ ಗಜ಼ಲೊಳು ಅರಳುತಿವೆ ಪ್ರೀತಿ ಹೂ

ಮೂಡಿ ಮಾಯವಾಗುತಿದೆ ಕಾಮನಬಿಲ್ಲು
ಹಲವು ಬಣ್ಣದಿ ಹೊರಳುತಿವೆ ಪ್ರೀತಿ ಹೂ

ಹೂ ನಗೆಯ ಚೆಲ್ಲುತ ಸಾಗುತಿದೆ ಚಂದಿರ
ನೀನಿಲ್ಲದೆ ಬಳಿ ಕೆರಳುತಿವೆ ಪ್ರೀತಿ ಹೂ

ತೋರಬಾರದಿತ್ತೆ ಬಂದೊಮ್ಮೆ ಮಂದಸ್ಮಿತ
ಕಾಣದೇ ಕಂಗಾಲಾಗಿ ತೆರಳುತಿವೆ ಪ್ರೀತಿ ಹೂ


ಡಾ.ಅಮೀರುದ್ದೀನ್ ಖಾಜಿ

3 thoughts on “ಡಾ.ಅಮೀರುದ್ದೀನ್ ಖಾಜಿ-ಗಜಲ್

Leave a Reply

Back To Top