ಕಾವ್ಯ ಸಂಗಾತಿ
ಅಕ್ಕಮಹಾದೇವಿ ತೆಗ್ಗಿ-
ಕಂದ
ಎನ್ನ ಮುದ್ದುಕಂದ
ಎನ್ನ ಬಾಳಿಗೆ ಆನಂದ
ನಿನ್ನ ನಗುವು
ನನಗೆ ಒಲವು
ಮನೆಯ ಜ್ಯೊತಿ ನೀ
ಸದಾ ಬೆಳಗು ನೀ
ನನ್ನ ಪ್ರೇಮದ ಪುತ್ಥಳಿ
ಮನಸ್ಸಿನ ಅರಗಿಳಿ
ನಿನ್ನ ನೋಟವೇ
ಬಾಳಿನ ಗೆಲುವು
ನೀ.ನಕ್ಕರೆ
ಬಾಳೆಲ್ಲ ಸಕ್ಕರೆ
ನೀ ಅತ್ತರೆ ಪನ್ನಿರಧಾರೆ.
ಬಾ ಕಂದ ಎನ್ನನು
ಅಪ್ಪಿಕೊಳ್ಳಲಾರೆಯಾ…
ಅಕ್ಕಮಹಾದೇವಿ ತೆಗ್ಗಿ
ಅತ್ಯುತ್ತಮ ಕವನ
ಧನ್ಯವಾದಗಳು