ಕಾವ್ಯ ಸಂಗಾತಿ
ಎ.ಎನ್.ರಮೇಶ್. ಗುಬ್ಬಿ.
ನಿವೇದನೆ.!
ಒಲವಿನ ರುಜು ಹಾಕಿ
ರುಜುವಾತು ಪಡಿಸಲಾರೆ
ಏಕೆಂದರೆ ಅನುರಾಗದಲಿ
ನಾ ಅಕ್ಷರಶಃ ಅನಕ್ಷರಸ್ತ .!
ಹೃದಯದ ಸಾಕ್ಷಿಯಿಟ್ಟು
ಸಾಬೀತು ಪಡಿಸಲಾರೆ
ಪ್ರೇಮ ಪ್ರಮಾಣದಲಿ
ನಾ ನಿಜಕ್ಕು ಅನನುಭವಸ್ತ.!
ಪೀಡಿಸಿ ಕಾಡಿಸಿ ಓಲೈಸುತ
ಬಲವಂತ ಪಡಿಸಲಾರೆ
ಬಲಾತ್ಕಾರದ ಪ್ರೀತಿಯಲಿ
ನಾನೆಂದೆಂದಿಗೂ ನಿರಾಸಕ್ತ.!
ಎ.ಎನ್.ರಮೇಶ್. ಗುಬ್ಬಿ.