ಕಾವ್ಯ ಸಂಗಾತಿ
ಅಮು ಭಾವಜೀವಿ ಮುಸ್ಟೂರು
ಕಣ್ಣ ಹನಿಯೊಂದು
ಕಣ್ಣ ಹನಿಯೊಂದು ಜಾರುತಿರೆ
ನೋವು ಮಾಗಿದ ಕವನ
ಕಂಬನಿಯ ಧಾರೆ ಹರಿದರೆ
ನೊಂದ ಭಾವವೊಂದು ಸಂಕಲನ
ಮಿಡಿವ ಮನವು ಮುದುಡಿ
ಮೌನ ದಾಳಿಗೆ ಮೊಗವು ಬಾಡಿ
ಹೃದಯದಾಳದ ಮಿಡಿತ
ಮಥಿಸಿದ ಭಾವ ಅದಕೆ ಕಾರಣ
ಮಾತು ಹೇಳದ ನೂರು ಭಾವ
ಕಣ್ಣೀರಲಿ ದಂಡಿಯಾಗಿ ಕಂಡಿತು
ಯಾವ ಕಾರಣಕೋ ಹೊರ ಬರದ
ವೇದನೆಯು ಕಣ್ಣ ಬಿಂದಾಗಿ ಉದುರಿತು
ಕಾರ್ಮೋಡ ಕವಿದಾಗ ಸುರಿವ
ಜೋರು ಮಳೆ ಈ ಕಂಬನಿ
ಬದುಕ ಬವಣೆಯ ತಣಿಸುವ
ಮನದ ಸಾಂತ್ವಾನದ ದನಿ
ಅಳುವ ಕಣ್ಣಿನೊಳಗೆ
ಖಾಲಿ ಆಗದ ಒರತೆಯಿದು
ನೋವಿಗೊಂದು ಬಂಧುವಾಗಿ
ಮರೆಸುವುದದನೆಲ್ಲ ಜೊತೆಗಿದ್ದು
ಕಣ್ಣು ಮನದ ಕನ್ನಡಿ
ನೋವಿಗೂ ನಲಿವಿಗದುವೆ ಮನ್ನುಡಿ
ಕಂಬನಿಯ ವೇದನೆಯು
ಜಾರಲಿ ಆ ನೋವ ಮರೆಸಲು
—————————–
ಅಮು ಭಾವಜೀವಿ ಮುಸ್ಟೂರು