ಡಾ. ಕಲ್ಬುರ್ಗಿ ಬಿದ್ದ ಮರವಲ್ಲ ಡಾ ಶಶಿಕಾಂತ ಪಟ್ಟಣ ರಾಮದುರ್ಗ

ಕಾವ್ಯ ಸಂಗಾತಿ

ಡಾ. ಕಲ್ಬುರ್ಗಿ ಬಿದ್ದ ಮರವಲ್ಲ

ಡಾ ಶಶಿಕಾಂತ ಪಟ್ಟಣ ರಾಮದುರ್ಗ

ಎಪ್ಪತ್ತೇಳು ವರುಷದ ಮರ
ಹಣ್ಣು ಹೂವು ಕಾಯಿ
ಶರಣ ಸಂಸ್ಕೃತಿಯ ನೆರಳು
ಗೂಡು ಕಟ್ಟಿ ಕೊಂಡಿದ್ದವು .
ಕಾಗಿ ಗುಬ್ಬಿ ಪಾರಿವಾಳ .
ಅಂದೊಮ್ಮೆ ಕಟುಕ
ಮರವ ಕಡಿದು ಉರುಳಿಸಿದ .
ಡಾ. ಕಲ್ಬುರ್ಗಿ ಬಿದ್ದ ಮರವಲ್ಲ .
ಬಿತ್ತಿದ ಬೀಜ ಬತ್ತದ ತೇಜ
ಸತ್ಯ ಸಮತೆ ನೇರ ನಿಷ್ಠುರತೆ
ಬರಹ ಚಿಂತನ ವೈಚಾರಿಕತೆ .
ಕನ್ನಡದ ಕೊಲಂಬಸ್
ಛಲದಂಕ ಮಲ್ಲ ಒಂಟಿ ಸಲಗ
ಮರೆತು ಹೋಗದ ಮುಗ್ಧ ಮನ
ವಚನಗಳ ರಾಶಿ ಕಲ್ಯಾಣವೇ ಕಾಶಿ
ಅಪ್ಪ ಬಸವನ ಮಾತು
ಹುಸಿ ಹೋಗದಿರಲು
ಹಗಲಿರುಳು ದುಡಿದರು
ಉಸಿರ ಒತ್ತೆಯನಿತ್ತು.
ಸಿಡುಕು ದುಡುಕು
ಆದರೂ ಪ್ರೀತಿಯ ತವರು .
ಯಾರೇ ತಿವಿದರೂ ಚುಚ್ಚಿದರೂ
ಬಗ್ಗದ ಜೀವ ನುಂಗಿದ ನೋವ
ಸಾವಿನಲ್ಲಿ ಸತ್ಯ ಮೆರೆದ ಸಂಶೋದಕ .

ಇಗೋ ನಿಮಗೆ ನಮ್ಮ ನಮನ .


ಡಾ ಶಶಿಕಾಂತ ಪಟ್ಟಣ ರಾಮದುರ್ಗ

6 thoughts on “ಡಾ. ಕಲ್ಬುರ್ಗಿ ಬಿದ್ದ ಮರವಲ್ಲ ಡಾ ಶಶಿಕಾಂತ ಪಟ್ಟಣ ರಾಮದುರ್ಗ

  1. ನಿಮ್ಮ ನುಡಿ ನಮನಕ್ಕೆ ನಮ್ಮದೊಂದು ಅಭಿಮಾನದ ಶರಣು ಸರ್
    ಸತ್ಯ.. ಸಮತೆ… ನೇರ… ನಿಷ್ಠುರತೆ..
    ಬರಹ… ಚಿಂತನ.. ವೈಚಾರಿಕತೆ…
    ಸಾವಿನಲ್ಲಿ ಸತ್ಯ ಮೆರೆದ ಸಂಶೋಧಕ
    ನಿಮ್ಮ ಬರಹದಿಂದ ಅವರನ್ನು ನಾವೆಲ್ಲ ಸ್ಮರಿಸುವ ಹಾಗಾಯಿತು… ಧನ್ಯವಾದಗಳು

  2. ಅತ್ಯುತ್ತಮ ಸುಂದರ ಕವನ ಸರ್
    ನೋವು ದುಃಖ ತಂದಿದೆ

  3. ಕಲಬುರ್ಗಿ ಅವರ ಬಗ್ಗೆ ಎಷ್ಟೊಂದು
    ಗೌರವ ಅಭಿಮಾನ ಹೊಂದಿರುವ ನಿಮಗೆ ಅವರ ಆಶೀರ್ವಾದ ಸದಾ ಕಾಲ ಇರುತ್ತೆ ಸರ್ ನೀವು ಕೂಡ ಅವರ ಮಾರ್ಗದಲ್ಲಿ ನಡೆದು ದೊಡ್ಡ ಸಂಶೋಧಕರಾಗಿ ಗುರುತಿಸಿಕೊಳ್ಳಿ ಎಂದು ಹಾರೈಸುತ್ತೇನೆ ಧನ್ಯವಾದಗಳು ಸರ್

Leave a Reply

Back To Top