ಕಾವ್ಯ ಸಂಗಾತಿ
ಅನಸೂಯ ಜಹಗೀರದಾರ
ಮನಸು ಬದಲಾಗಬೇಕಿದೆ
ಈಗೇನು..?
ಬದಲಾವಣೆಯ ಗಾಳಿ ಬೀಸಿದೆ .
ಉಸಿರುಗಟ್ಟುವ
ಅಡಿಗೆ ಮನೆ ಇಲ್ಲವೀಗ
ಅಲ್ಲಿ
ವಾತಾನುಕೂಲಗಳಿವೆ.
ಗ್ಯಾಸ್ ಒಲೆಗಳಿವೆ
ಮೇಲೆ ಘಾಟು ಹಾರಲು
ಎಕ್ಸಿಸ್ಟೆಡ್ ಫ್ಯಾನ್ ಗಳಿವೆ.
ಕೂಲಾಗಿರಲು ಫ್ರಿಜ್ ಗಳು .
ಅದರ ತುಂಬಾ ತರಕಾರಿಗಳು
ಹಣ್ಣುಗಳು
ಹುಳ,ಬೂಸ್ಟು ಹತ್ತದಂತೆ
ನಿಗಾವಹಿಸುವ
ಸೌಕರ್ಯಗಳು
ವಿವಿಧ ತರಾವರಿ ತಿನಿಸುಗಳು.
ತಿನ್ನಲು ಫ್ರೆಷ್ ಆಗಬೇಕೀಗ
ಮನಸುಗಳು
ಹೊಸ ವಿಚಾರ ಕಾಲಿಡಬೇಕು
ಹಳೆಯ ವಿಚಾರ ತೊಲಗಬೇಕು
ಬನ್ನಿ ಸ್ಮಾರ್ಟ್ ಕಿಚನ್ ಗೆ
ಹಾಗೆಯೇ ಪೂರ್ವಾಗ್ರಹಗಳ
ಬಿಡಿಸಿಕೊಂಡು
ಟೀಕಿಸುವ ಪ್ರವೃತ್ತಿಯ
ಬದಲಿಸಿಕೊಂಡು
ಪಕ್ಕದೂಟ ರುಚಿಯೆಂಬ ಭ್ರಮೆಯ
ಕದಲಿಸಿಕೊಂಡು
ಬಡಿಸಿದ ಕೈಗಳ ಹೊಗಳಿಬಿಡಿ
ಮೊಗವ ಅರಳಿಸಿಬಿಡಿ
ರುಚಿ ರಸಪಾಕವ ಸವಿದುಬಿಡಿ
ರೆಸ್ಟೋರೆಂಟ್ ನಲ್ಲಿ ಸಿಗಲಾರದ್ದು
ಏನಲ್ಲವಾದರೂ
ಇಲ್ಲಿ ಇದ್ದದ್ದು ಬೇರೆಲ್ಲೂ ಇಲ್ಲ
ಅನ್ನುವುದಿಲ್ಲವಾದರೂ
ಅದಕ್ಕೊಂದು ಮಹತ್ವ
ಅರ್ಥ ಇದೆ
ಇಲ್ಲವೆಂದೇನಲ್ಲ
ಇಲ್ಲಿ….ಅಗತ್ಯವೊಂದೆ..
ಮನಸು ಬದಲಿಸಬೇಕಿದೆ
ಗಾಳಿಯೊಂದಿಗೆ ಗುದ್ದಾಡಿ
ಬೇಯಿಸಿ ಹಾಕಿದವರ
ಶ್ರಮವ ಅರಿಯಬೇಕಿದೆ
ಇಲ್ಲಿ:
ಮನಸು ಬದಲಾಗಬೇಕಿದೆ
ಅನಸೂಯ ಜಹಗೀರದಾರ
ಪಕ್ಕದೂಟ ರುಚಿಎಂಬ ಕಲ್ಪನೆ ಚೆನ್ನಾಗಿದೆ ಕವನ ಮೇಡಂ
ಬದಲಾವಣೆಯ ಗಾಳಿಗೆ ತಪಸ್ಸು?
ನಿಜ..ತಪವೇ ಸರಿ..ಧನ್ಯವಾದಗಳು ಮೇಡಮ್.
ಧನ್ಯವಾದಗಳು ಮೇಡಮ್..
ರುಚಿ ಸವಿ ಊಟದಂತೆ ನಿಮ್ಮ ಕವಿತೆ ಮೇಡಂ
Thanks Mam..!
ಬದಲಾಗಬೇಕಿದೆ…… ಚೆನ್ನಾಗಿದೆ ಮೇಡಂ