ಕಾವ್ಯ ಯಾನ
ಡಾ.ಡೋ.ನಾ.ವೆಂಕಟೇಶ
ಚಂದಿರನಿಗೆ ಲಗ್ಗೆ
ನಿಮ್ಮ ಎಲ್ ವಿ ಎಂ 3
ಹೊತ್ತ ಚಂದ್ರ ನೌಕೆಯ
ಗತ್ತು-
ಭೋರೆಂದು ಚಿಮ್ಮಿದ ಅಗ್ನಿಕುಂಡದಿಂದ ಎದ್ದ
ದಿವ್ಯಾನುಭೂತಿ!
ಚಂದಿರನ ಮೇಲ್ಮೈ ಮೇಲಿಳಿದ ವಿಕ್ರಮ
ಅಳೆದಳೆದ ಪ್ರಗ್ಯಾನ್
ಕಂದಕದ ಉದ್ದಗಲ
ಅದೇನು ಇಲ್ಲಿ ಇದು ಯಾವ
ಅನಿಲ?
ಇಲ್ಲೇಕೆ ಈ ವಿಕಿರಣ
ಇದು ಯಾವ ಧಾತುವಿನ ಚರಣ
ಮತ್ತೇಕೆ ಚಂದ್ರ ನಾ ನಿಲ್ಲಲಾರೆ
ಇಲ್ಲಿ ನಿನ್ನ ನೆಲಕ್ಕೂರಲಾರೆ
ಉಸಿರಾಡಲೂ ಕಷ್ಟ
ನನ್ನ ಗಾಳಿ ನಾನೇ ತರಲಾ!
ಹೌದು ಚಂದ್ರ ದೂರದ
ನನ್ನೂರಿಂದ ನಿನ್ನ ಕಂಡು
ಮಂಡಿಯೂರಿ ನಿಂತು ಪ್ರಿಯೆಯಡಿಯಲ್ಲಿ ನಾ
ಹಾಡಿದ್ದೆಲ್ಲಿ
ಮಧು-ಚಂದ್ರ!
ಏಕೋ ಹೊನಲೆಲ್ಲಾ ಗೋಜಲು
ಚಂದಿರ
ಮುಂದಿವೆ ಮಜಲು
ಮಾಡಲಿಕ್ಕಿದೆ
ಇಂದ್ರ ಮಹೇಂದ್ರರ ರಹಸ್ಯ
ಬಯಲು!
ಇಸ್ರೋ
ನಿಮಗೊಂದು ನಮನ!
ನಿಮ್ಮ
ಶ್ರಮಕ್ಕೊಂದು ಶಾಭಾಷ್!
ಡಾ.ಡೋ.ನಾ.ವೆಂಕಟೇಶ
Wow suuuuuperrrrrr
Thanqqqqqq