ಕಾವ್ಯ ಸಂಗಾತಿ
ಸುಧಾ ಪಾಟೀಲ ಕವಿತೆ
ಕಾದು ಕುಳಿತಿಹೆನು
ಕಾದು ಕುಳಿತಿಹೆನು
ನಿನಗಾಗಿ
ಒಳ ಹೊರಗಿನ
ವಾಸ್ತವವನ್ನು
ಬದಿಗಿಟ್ಟು
ತುಡಿಯುವ ಮನದ
ಆಳ ಅಗಲವನ್ನು
ಬಚ್ಚಿಟ್ಟು
ಚೆಲುವನ ಹೃದಯದಿ
ಹುದುಗಿಸಿಟ್ಟು
ಯಾರಿಗೂ ಕಾಣದೆ
ಅಡಗಿಸಿಟ್ಟು
ನಿನ್ನ ನೆನಪಿನ
ರಂಗೋಲಿಯಲ್ಲಿ
ಚೆನ್ನಿಗನ ಚಿತ್ರ
ಬರೆದು
ಕಾದು ಕುಳಿತಿಹೆನು
ಪ್ರೇಮ ಪತ್ರದ
ಪರಿಭಾಷೆಯ ಮೀರಿ
ಆತ್ಮದ ಗುಣವ
ಅರಿತು
ಗಟ್ಟಿಕೊಂಡ
ಗೆಳೆತನ
ಹೇಳದೆ ಕೇಳದೆ
ಮುನ್ನುಡಿ
ಬರೆದಾಗ ಕಾದು
ಕುಳಿತಿಹೆನು
ಚೆಲುವ ಚೆನ್ನಿಗನ
ಕಾಯುತ
ಅವನೆದೆಗೆ ಒರಗಿ
ಭದ್ರ ಬಾಹುಬಂಧನದಿ
ಅಡಗಲು
ಜಗದ ಆಗುಹೋಗುಗಳ
ಮರೆಯಲು
ಕನಸುಗಳ ಮಾಲೆ
ಹೆಣೆದು
ಕಾದು ಕುಳಿತಿಹೆನು
ತುಟಿಯ ಅಂಚಿನ
ನಗುವ ಮರೆತು
ಮನದ ಗಲಿಬಿಲಿಯ
ಶಬ್ದವ ಅಡಗಿಸಿ
ಹೊತ್ತು ಹೊತ್ತಿಗೊಮ್ಮೆ
ಭಾವುಕಳಾಗಿ
ಕಾದು ಕುಳಿತಿಹೆನು
ನೀನೇ ಸರ್ವಸ್ವವೆಂದು
ಚೆಲುವ ಚೆನ್ನಿಗನೆಂದು
ಸರಿಸಾಟಿಯಿಲ್ಲದ
ಗೆಳೆಯನೆಂದು
ತವಕದಿಂದ ನಿನ್ನನ್ನಪ್ಪಲು
ಕಾದು ಕುಳಿತಿಹೆನು
ಸುಧಾ ಪಾಟೀಲ
ಅಧ್ಬುತ ಸುಂದರ ಕವನ
ಧನ್ಯವಾದಗಳು ಸರ್ ತಮ್ಮ ಪ್ರೋತ್ಸಾಹದ ನುಡಿಗಳಿಗೆ