ಜೀವನಪ್ರೀತಿ ಭಾರತಿ ಅಶೋಕ್ಅವರ ಲೇಖನ

ಲೇಖನ

ಭಾರತಿ ಅಶೋಕ್

ಜೀವನಪ್ರೀತಿ

ಯಾರೊ ಒಬ್ಬರು ಸಮಾಜಕ್ಕೆ ಸದಾ ನಗುವನ್ನು ಉಣ ಬಡಿಸುತ್ತಾರೆ ಎಂದರೆ  ಅವರ ಬದುಕು ನಿಜವಾಗಿಯೂ ನೆಮ್ಮದಿಯಿಂದ  ಇರತ್ತದೆ ಎಂದಲ್ಲ..ತಾವು ತಮ್ಮ ಜಿವನದಲ್ಲಿ ಅನುಭವಿಸಿದ ನೋವೆಲ್ಲವೂ ಅವರ ಯಾವುದೋ ಒಂದು ಅಭಿವ್ಯಕ್ತಿಯ ಮಾಧ್ಯಮದಲ್ಲಿ ಹೊರ ಹೊಮ್ಮುತ್ತದೆ. ನಟನೆ,  ಬರವಣಿಗೆ, ನೇರವಾದ ಮಾತುಗಳಲ್ಲಿ ಆ ನೊವು ಕಲೆಯ ರೂಪ ಪಡೆಯುತ್ತದೆ.

            ನಮ್ಮ ನಡುವೆ ಯಾರಾದರೂ ಹರಳು ಉರಿದಂತೆ ಮಾತನಾಡುವರು ಎಂದರೆ ಅವರಲ್ಲಿ ಯಾವುದೋ ನೋವು ಕಾಡುತ್ತದೆ, ಮಾತಿನ ಮೂಲಕ ಹೊರ ಹೊಮ್ಮುವ ನೋವು ಕೇಳುಗನಿಗೆ ಹಾಸ್ಯಾಸ್ಪದ ಎನ್ನಿಸಿಬಿಡುತ್ತದೆ. ಅವರು ಕೇವಲ ಜೋಕರನಂತೆ ಕಾಣುತ್ತಾರೆ.ಕೆಳುವವರ ಹಾಸ್ಯದ ವಸ್ತುವಾಗುತ್ತಾರೆಯೇ ಹೊರತು ಅವರ ಮಾತಲ್ಲಿರುವ ನೋವು ಯಾರಿಗೂ ತಾಗುವುದೇ ಇಲ್ಲ ನಕ್ಕು ಸುಮ್ಮನಾಗಿ ಬಿಡುತ್ತಾರೆ.

              ಇನ್ನು ತೆರೆಯ ಮೇಲೆ ರಂಜಿಸಿದ “ಚಾರ್ಲಿ ಚಾಪ್ಲಿನ್” ರ ಬದುಕು ಅಷ್ಟೆ.ಅವರ ನಟನೆಯನ್ನು ಕಂಡವರು ಅದೆಷ್ಟು ಜನ ನಕ್ಕು ತಮ್ಮ ನೋವನ್ನೆಲ್ಲ ಮರೆತಿಲ್ಲ. ಮಾತಿಲ್ಲದೇ.ಭಾವ ಬಂಗಿಗಳಲ್ಲೇ ಬದುಕಿನ ಎಲ್ಲ ಸಂದರ್ಭಗಳನ್ನು ಅಭಿವ್ಯಕ್ತಿಸುತ್ತಾರೆ. ಅದರೆ ಅವರ ಬದುಕಿನಲ್ಲಿ ಅನುಭವಿಸಿದ ಅಗಾಧ ನೋವು ನಟನೆಯಲ್ಲಿ ಪಕ್ವಗೊಂಡಿತ್ತು  ಎನ್ನುವುದು ಅಷ್ಟೇ ಸತ್ಯ.

    ಬರಣಿಗೆಗೆ ಬಂದರೆ ”ಹಾಸ್ಯ ಬ್ರಹ್ಮ”’ನೆಂದೇ ಗುರುತಿಸಲ್ಪಟ್ಟ ‘ಬೀಚಿ’ಯವರ ಒಂದೊಂದು ಶಬ್ಧವು ಕೇಳಗನ ಕಿವಿಗೆ ಹಾಸ್ಯದ ಹೊನಲನ್ನು ಹರಿಸಿ ನಗಿಸಿ ಬಿಡುತ್ತವೆ.ನಕ್ಕವರು ಸ್ವಲ್ಪ ಯೋಚಿಸಿದರೆ ನಕ್ಕವರ ಬದುಕಿನ ಸಂದರ್ಭದ  ಯಾವುದೋ ನೋವಿನ ಎಳೆ ಅವರನ್ನು ಕಣ್ತೆರೆಸಬಹುದು. ದೊಡ್ಡದೊಂದು ಉಸಿರು ಹೊರಬರಬಹುದು. ಮಾತಿನ ಹಿಂದಿನ ಆ ನೊವು ಕೇವಲ ಲೇಖಕನದ್ದಾಗಿರಲು ಸಾಧ್ಯವಿಲ್ಲ  ಏಕೆಂದರೆ, ಲೇಖಕ ಕೇವಲ ವ್ಯಯುಕ್ತಿಕ ಚಿಂತನೆ ಮಾಡಲಾರ. ಅದು ಸಮಾಜದ ಚಿಂತನೆ. ಆಯಾ ಕಾಲ ಸಂದರ್ಭದ ಸಮ ಸಮಾಜದಲ್ಲಿನ ಸಂದರ್ಭಕ್ಕೆ ಪ್ರತಿಕ್ರಿಯಿಸುವುದು ಲೇಖಕನ ಜವಾಬ್ದಾರಿ. ಸಮಾಜದ ಪ್ರತಿಯೊಬ್ಬರೂ ಒಂದಿಲ್ಲೊಂದು ಸಂದರ್ಭದಲ್ಲಿ  ಅನುಭವಿಸಿಯೇ ತಿರುವ ನೋವಾಗಿರುತ್ತದೆ. ಅದು ಸಮಷ್ಟಿಯ ಹಿತವನ್ನು ಒಳಗೊಂಡಿರುತ್ತದೆ. ತಾನು ಎಷ್ಟೇ ನೆಮ್ಮದಿಯಿಂದದ್ದರೂ ಸಮಾಜದ ಅಹಿತ ಕಂಡಾಗ ಆತರ ಮನಸ್ಸು ಚಡಪಡಿಸುತ್ತದೆ, ನೆಮ್ಮದಿಯನ್ನು ಕಳೆದುಕೊಂಡು, ಅದರ ಹುಡುಕಾಟಕ್ಕೆ ಸಜ್ಜಾಗುತ್ತದೆ ಆ ಮೂಲಕ ಪರಿಹಾರಗಳನ್ನು ಕಂಡುಕೊಳ್ಳುಲು ಹೆಣಗಾಡುತ್ತದೆ.

    ಹಾಗೆ ನೊಡಿದರೆ ಬೀಚಿಯವರ ಬದಕು ಸಹ ಬಾಲ್ಯದಿಂದಲೂ ಕಠಿಣವಾಗಿಯೇ ಇದ್ದುದು ಹುಟ್ಟುವಾಗಲೇ ಹೆತ್ತಾತನ ನಿರ್ಗಮನವಾಗಿತ್ತು ಬಾಲ್ಯದಲ್ಲಿ ತಾಯಿ ಸೊದರತ್ತೆಯ ಹಾರೈಕೆಯಲ್ಲಿ ಅತೀ ಕಷ್ಟದ ಬದುಕು ಕಂಡವರು ಮುಂದೆಯೂ ವೃತ್ತಿ ಜೀವನ ಹಣಕಾಸಿನ ತೊಂದರೆ ನೀಗಿಸಿತೇ ಹೊರತು  ನೆಮ್ಮದಿ ತರಲಿಲ್ಲ. ಬೆಳೆದ ಮಗನ  ಸಾವಿನ ನೋವು ಅವರನ್ನು ಸದಾ ಭಾದಿಸುತ್ತಲೇ ಇತ್ತು. ಹೆತ್ತವರ ಮುಂದೆ ಮಕ್ಕಳ  ಅವಸಾನ ಯಾರನ್ನು ಭಾದಿಸದೆ ಇರದು. ಅದರೂ, ಆ ನೋವಿನಲ್ಲೂ”ಅತ್ತರೆ ಸತ್ತವರು ಮತ್ತೆ ಬರುತ್ತಾರಾ?” ಎನ್ನುತ್ತಾ ಬದುಕಿನ ಬಹುದೊಡ್ಡ ತತ್ವವನ್ನು  ಸಾರುತ್ತಾರೆ. ಯಾರೆ ಸತ್ತರೂ ಇದ್ದವರ ಬದುಕು ಸಾಯುವತನಕ ನಡೆಯಲೇಬೇಕು ಎನ್ನುತ್ಯಾ “ಜೀವನ ಪ್ರೀತಿ”ಯನ್ನು ಮೆರೆಸುತ್ತಾರೆ. ಪ್ರತಿಯೊಬ್ಬರಿಗೂ ನೋವಿದೆ ಅದನ್ನು ನಲಿವನ್ನಾಗಿ ಮಾಡಿಕೊಳ್ಳುವ ಕಲೆಯೂ ಮನುಷ್ಯರಿಗೆ ಗೊತ್ತಿದೆ ಎನ್ನುವ “ದಾರ್ಶನಿಕ” ಬೀಚಿ ಯವರ ಬದಕು ಮತ್ತು ಮಹಾನ್ ಕಲಾವಿದ ಚಾಪ್ಲಿನ್ನರ ಬದುಕು ನಮ್ಮ ನೋವಿನ  ಮುಲಾಮ್ ಆಗಬೇಕಾಗಿದೆ.


ಭಾರತಿ ಅಶೋಕ್

Leave a Reply

Back To Top