ಅನಸೂಯ ಜಹಗೀರದಾರ ಲಾಸ್ಟ ಕಾಲ್

ಕಾವ್ಯ ಸಂಗಾತಿ

ಅನಸೂಯ ಜಹಗೀರದಾರ

ಲಾಸ್ಟ ಕಾಲ್

ಇತ್ತ
ಒಂದು ಕರೆ
ಅತ್ತ ರಿಸೀವ್ ಮಾಡಿದ ಸದ್ದು
ಅದೇಕೋ ಮಧ್ಯ ಮಧ್ಯ ಲೈನ್ ಬ್ಯೂಸಿ

“ಹಲೋ” ಎಂದ ಪ್ರತಿಕ್ರಿಯೆ
ನಡುನಡುವೆ..
ಏನೋ ಗುಣುಗುಟ್ಟುವ ಸದ್ದು
ಮುಲುಗಾಟದ ಶಬ್ದ

ಹಿಡಿದ ಮೊಬೈಲ್ ಹೊರಳಾಡಿರಬೇಕು
ಬೆರಳುಗಳಿಂದ ಬೆರಳಿಗೆ ಚಲಿಸಿರಬೇಕು
ಅಂದುಕೊಂಡಳಾಕೆ..!

ಇನ್ನೇನು ನಿಲ್ಲಿಸಬೇಕು
ಅಂದುಕೊಳ್ಳುತ್ತಿರುವಾಗಲೇ
ಕಿಲಕಿಲನೆ ನಗುವ ಸ್ಪಷ್ಟ ದನಿ
ಅತ್ತ

ಮತ್ತೇ ಮುಲುಗಾಟ ಹೊರಳಾಟ
ಕೊಸರಿಕೊಳ್ಳುವ
ಸರಪರ ಸದ್ದು..

“ಇದೇ ಲಾಸ್ಟಕಾಲ್”
ಅಂದುಕೊಳ್ಳುತ್ತ
ಕರೆ ಕಟ್ ಮಾಡಿದಳಾಕೆ.
ಇತ್ತ..!


ಅನಸೂಯ ಜಹಗೀರದಾರ

Leave a Reply

Back To Top