ಕಾವ್ಯ ಸಂಗಾತಿ
ಮನ್ಸೂರ್ ಮುಲ್ಕಿ
ಕಾಡ ಹೂವು
ಅಂದ ಕೆಡದ ಚಂದ ಮೂಡಿದ
ಕಾಡ ಹೂವ ಬಲ್ಲಿರೇನು
ಬೆಟ್ಟದೊಳಗಿನ ಹಾದಿಯೊಳಗೆ
ನೀವು ನಡೆದರೆ ಕಾಣದೇನು.
ಎಂದು ಕಂಡಿರದ ಬಾರೀ ಬಣ್ಣದ
ಹೂವ ಬಳಿಗೆ ಹೋಗಿ ನೋಡಿ
ತಾಯಿ ಪ್ರಕೃತಿ ಕೊಟ್ಟ ಕೊಡುಗೆಯ
ಸವಿಯನೊಮ್ಮೆ ಉಂಡು ನೋಡಿ.
ತಂಪಗೆ ಹವೆಯಲ್ಲಿ ಬೀಸುವ ಗಾಳಿಗೆ
ವಿಧವಿಧ ಹೂಗಳ ನರ್ತನವು
ದೂರ ದೃಷ್ಟಿಗೆ ಕಾಣುವ ನೋಟವು
ಚಂಚಲತೆ ಮೂಡಿಸೋ ಆಟವು.
ದಿನವೂ ಅರಳುವ ಸರಮಾಲೆ ಹೂಗಳ
ಕಥೆಗಳನು ವರ್ಣಿಸಬಹುದೇನು.
ಹೂವಿನಂದಕೆ ನಗುವ ಬೀರದ
ತಾಯಿ ಮನಸುಗಳುಂಟೇನು.
ನಗುವನ್ನು ಬೀರುವ
ಮನುಜನ ಸಹಜ ಗುಣ
ಅರಳುವ ಹೂವಂತಿರಬೇಕು
ಅದು ಜಗದಲ್ಲಿ ನೆಲೆಗೊಳ್ಳಬೇಕು.
ಮನ್ಸೂರ್ ಮುಲ್ಕಿ