ಡಾ ಶಶಿಕಾಂತ ಪಟ್ಟಣ ರಾಮದುರ್ಗಇವರು ಕೊಂದರು

ಕಾವ್ಯಸಂಗಾತಿ

ಡಾ ಶಶಿಕಾಂತ ಪಟ್ಟಣ ರಾಮದುರ್ಗ

ಇವರು ಕೊಂದರು

ಇವರು ಕೊಂದರು
ನನ್ನ ಶರಣರ
ನಿತ್ಯ ಮರಣ ಹೋಮವು
ಸತ್ಯ ಹೇಳಿದ
ದಿಟ್ಟ ಯೋಧರು
ಕಷ್ಟ ಕೋಟಲೆ ಮೆಟ್ಟಿಲು

ಬುದ್ಧ ಬಸವನ
ಕೊಂದು ಬಿಟ್ಟರು
ಶಾಂತಿ ಸಮಾಧಿಯಾಯಿತು
ರಕ್ತ ಕೋಡಿ ಹರಿಯಿತು
ಕಲ್ಯಾಣ ಕಟುಕರ
ಕೇರಿಯಾಯಿತು

ಗಾಂಧಿಯ ಎದೆಗೆ
ಗುಂಡನಿಟ್ಟರು
ಅಹಿಂಸೆ ಕಗ್ಗೊಲೆಯಾಯಿತು
ಈಶ್ವರಚಂದ್ರರು
ವಿಷವನುಂಡರು
ಕ್ರೌರ್ಯ ನೆಲದಿ ಮೆರೆಯಿತು

ಅಂಧಶೃದ್ಧೆ ಹೋಗಲೆಂದ
ದಾಬೋಲ್ಕರ
ಹತ್ಯೆಯಾದರು
ಸತ್ಯ ಹೇಳಿದ
ಪನಸಾರೆ ಇಲ್ಲವಾದರು
ಭೂಮಿ ಮೇಲೆ

ಅಗೆದು ತೋರಿದ
ಇತಿಹಾಸ ಸಂಸ್ಕೃತಿ
ಇವರೇ ಕೊಂದರು ಕಲಬುರ್ಗಿಯವರನ್ನು
ಗೌರಿ ಲಂಕೇಶ್
ಗಟ್ಟಿ ಯೋಧಳು
ಮಣ್ಣಾದಳು ಮರ್ತ್ಯದಿ

ಮತ್ತೆ ಮತ್ತೆ ಕೊಲೆ ಹಿಂಸೆ
ಸಮತೆ ಶಾಂತಿ ಸಾಯುತಿಹವು
ಗೊಡ್ಡುಪುರಾಣ ಮೆರೆದವು
ಕ್ರಾಂತಿ ಕಹಳೆ
ಮೊಳಗಬೇಕು

ಮೌಡ್ಯ ಮೆಟ್ಟಿ ನಿಲ್ಲಬೇಕು


ಡಾ ಶಶಿಕಾಂತ ಪಟ್ಟಣ ರಾಮದುರ್ಗ

9 thoughts on “ಡಾ ಶಶಿಕಾಂತ ಪಟ್ಟಣ ರಾಮದುರ್ಗಇವರು ಕೊಂದರು

  1. ಸತ್ಯದ ಅನಾವರಣದ ಅಭಿವ್ಯಕ್ತಿ ಸುಂದರವಾಗಿದೆ ಸರ್ ಧನ್ಯವಾದಗಳು

  2. ನೇರ, ನಿಷ್ಟುರ ವ್ಯಕ್ತಿತ್ವದ , ವೈಚಾರಿಕತೆಯ ಕಗ್ಗೊಲೆ ಸರ್ ಇದು..ಕವನ ಬಹಳ ಅರ್ಥಪೂರ್ಣ ಹಾಗೂ ಮಾರ್ಮಿಕವಾಗಿ ಮೂಡಿ ಬಂದಿದೆ.

  3. ಬದಲಾವಣೆಗೆ ಹೇಳಿರುವ ಅರ್ಥಪೂರ್ಣ ಕವನ

  4. ಪ್ರೌಡ ಪರಾಕಾಷ್ಟೆಯ ಕವನ ಸರ

    ಸತ್ಯ ತೋಡಿಕೊಂಡ ನೋವಿನ ಅಳಲು

    1. ಸತ್ಯವನ್ನು ದಾಖಲಿಸಿದ ಕವಿತೆ.
      ಕ್ಷುದ್ರ ಶಕ್ತಿಗಳ ಬಗ್ಗೆ, ವಚನ ಚಳುವಳಿಯ ಕೊಂದವರ ಬಗ್ಗೆ, ಬಿಜ್ಜಳನ ತಲೆ ಕೆಡಿಸಿದವರ ಬಗ್ಗೆ, ಬಸವಣ್ಣನ ಕಾಲದ ವಿರೋಧಿಗಳೇ, ಗೋವಿಂದ ಪನ್ಸಾರೆ, ದಾಬೋಲ್ಕರ್, ಡಾ.ಎಂ.ಎಂ.ಕಲಬುರ್ಗಿ , ಗೌರಿ ಲಂಕೇಶ್ ರ ಕಾಲದಲ್ಲೂ ಇದ್ದರು, ಈಗಲೂ ಇದ್ದಾರೆಂಬುದು ಕವಿತೆಯಲ್ಲಿ ಮುನ್ನೆಲೆಗೆ ಬರುವಂತೆ, ಧ್ವನಿಸಬೇಕು.

Leave a Reply

Back To Top