ಕಾವ್ಯ ಸಂಗಾತಿ
ವಿಮಲಾರುಣ ಪಡ್ಡoಬೈಲು
ಬದುಕು
ನನ್ನ ಮುಂದಿದ್ದ ಗಿಡ
ಗಾಳಿಗೆ ತೊನೆದಾಡುತ್ತಿತ್ತು
ದಶದಿಕ್ಕೀಗೆ ತನ್ನ ಪತ್ರವ ಹರಿಸಿ
ಪ್ರಕೃತಿಯ ಸವಿಯುತಲಿತ್ತು
ಹೊಸದರ ಆಗಮನ.
ಮನುಜರ ಬದುಕು ಹೀಗಾಗದೇಕೆ?
ದಶದಿಕ್ಕಿನ ಕಡೆ ಸರಿದು
ಮತ್ತೆ ಪೂರ್ಣತೆಗೆ ಮರಳುವುದಿಲ್ಲವೇಕೆ?
ಹತ್ತು ಕಡೆ ಹಲವು ಯೋಚನೆ
ಮಾನವತೆಯ ಮೂಡಿಸಬೇಕಿತ್ತು
ಹಾಗಾಗಲಿಲ್ಲ ಭಾವ ಬೆಸೆಯಲಿಲ್ಲ.
ಇದು ಇಂದು ನಿನ್ನೆಯದಲ್ಲ
ನಿರಂತರ ನಡೆಯುತ್ತಿಹುದು
ತೂತು ಮುಚ್ಚುವ ಕಾರ್ಯ
ಸಣ್ಣ ತೂತು ಸಾವರಿಸಿ ಮುಚ್ಚಿದಂತಾದರು ಮರುಗಳಿಗೆಯಲ್ಲಿ ಯಥಾಸ್ಥಿತಿ.
ಹಿಂದಿನದಕೆ ಮುಂದಿನದೇ ಚಿಂತೆ
ಮುಂದಿನದಕೆ ಹಿಂದಿನದೇ ಚಿಂತೆ
ಚಿಂತೆಯ ಸುಳಿಗೆ ಸಿಲುಕಿ
ದಡ ಸೇರುವ ಹಂಬಲ
ಇಂದಾ… ನಾಳೆನಾ…?
ಬದುಕು ಅಲ್ಲ ಶಾಶ್ವತ
ಮರುಭೂಮಿ ಮರಳ ದಿಣ್ಣಿ
ನಿನ್ನೆ ಇಂದಲ್ಲ ನಾಳೆ ಇಂದು
ಬದುಕು ಪೋಣಿಸ ಹೊರಟರೆ
ಕಂಡದ್ದು ಮತ್ತದೇ ಕುಂದು….
ವಿಮಲಾರುಣ ಪಡ್ಡoಬೈಲು